ಭುವನೇಶ್ವರ್: ಜಾತ್ರಾ ಮಹೋತ್ಸವದಲ್ಲಿ ಪಟಾಕಿ ರಾಶಿಗೆ ಬೆಂಕಿ ತಗುಲಿದ ಪರಿಣಾಮ ಸ್ಪೋಟಗೊಂಡು ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಒಡಿಶಾದ (Odisha) ಪುರಿಯಲ್ಲಿ (Puri) ಭಗವಾನ್ ಜಗನ್ನಾಥ ದೇವಾಲಯದಲ್ಲಿ ಚಂದನ್ ಜಾತ್ರಾ ಉತ್ಸವದ (Lord Jagannath’s Chandan Jatra festival) ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸ್ಫೋಟಗೊಂಡ (Firecrackers exploded) ಪರಿಣಾಮ 15 ಜನ ಗಾಯಗೊಂಡಿದ್ದು, ಅದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಜಾತ್ರಾ ಉತ್ಸವದ ವೇಳೆ ಭಕ್ತರು ಪಟಾಕಿ ಸಿಡಿಸುತ್ತಿದ್ದರು. ಈ ಸಂದರ್ಭದಲ್ಲಿ ರಾಶಿ ಹಾಕಿದ್ದ ಪಟಾಕಿಗೆ ಬೆಂಕಿ ತಗುಲಿದೆ. ಇದು ಸ್ಫೋಟಕ್ಕೆ ಕಾರಣವಾಗಿದೆ. ಅವಘಡದ ವೇಳೆ ನೂರಾರು ಭಕ್ತರು ಜಲಧಾರೆ ನರೇಂದ್ರ ಪುಷ್ಕರಿಣಿಯ ನದಿಗೆ ಹಾರಿದ್ದಾರೆ.
ಘಟನೆಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.