ಮಿಲಿಟರಿ ಕ್ಯಾಂಪ್ ನಲ್ಲಿ ಸ್ಫೋಟ : 20 ಮಂದಿ ಮೃತ

1 min read
military camp

ಮಿಲಿಟರಿ ಕ್ಯಾಂಪ್ ನಲ್ಲಿ ಸ್ಫೋಟ : 20 ಮಂದಿ ಮೃತ

ಲಾಗೋಸ್ : ಮಿಲಿಟರಿ ಕ್ಯಾಂಪ್ ಮತ್ತು ವಸತಿ ಗೃಹ ಪ್ರದೇಶಗಳಲ್ಲಿ ಆಕಸ್ಮಿಕವಗಿ 4 ಸ್ಫೋಟಕಗಳು ಸ್ಫೋಟಗೊಂಡು 20 ಮಂದಿ ಮೃತಪಟ್ಟಿದ್ದು, 200 ಮಂದಿ ಗಾಯಗೊಂಡಿರುವ ಘಟನೆ ಈಕ್ವಟೋರಿಯಲ್ ಗಿನಿಯದಲ್ಲಿ ನಡೆದಿದೆ.

ಇದಲ್ಲದೆ ಘಟನೆಯಲ್ಲಿ ಬಾಟಾದ ಎನ್ ಕೋವಾ ಎನ್ಟೋಮಾ ಶಿಬಿರದ ಸುತ್ತಲಿನ ಕಟ್ಟಡಗಳು ಸುಟ್ಟುಕರಕಲಾಗಿದೆ. ಅಲ್ಲದೆ ಅನೇಕ ಮನೆಗಳು ನೆಲಕ್ಕೂರುಳಿದೆ. ಸದ್ಯ ಕಾರ್ಯಚರಣೆ ಭರದಿಂದ ಸಾಗಿದ್ದು, ಕಟ್ಟಡಗಳಲ್ಲಿ ಸಿಲುಕಿದ್ದ ಮಕ್ಕಳು ಹಾಗೂ ವಯಸ್ಕರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.
military camp
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ಟಿಯೊಡೊರೊ ಒಬಿಯಾಂಗ್ ನ್ಗುಮಾ, ಎನ್ಕೋಮಾ ಮಿಲಿಟರಿ ಕ್ಯಾಂಪ್ ನಲ್ಲಿ ಸ್ಫೋಟಕಗಳು, ಡೈನಮೈಟ್ ಹಾಗೂ ಸಿಡಿಮದ್ದುಗಳನ್ನು ಸಂಗ್ರಹಿಸುವ ಉಸ್ತುವಾರಿ ಘಟಕದ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಎಂದಿದ್ದಾರೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd