ಪೆಟ್ರೋಲ್ ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಕಡಿತಕ್ಕೆ ಕೇಂದ್ರ ಸಜ್ಜು…! ಚುನಾವಣೆ ತಂತ್ರನಾ..!
ನವದೆಹಲಿ: ಕಳೆದ ಕೆಲ ದಿನಗಳಿಂದ ರಾಕೆಟ್ ಸ್ಪೀಡ್ ನಲ್ಲಿ ಏರಿಕೆಯಾಗುತ್ತಲೇ ಇರುವ ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ದೇಶದ ಜನರು ಕಂಗಾಲಾಗಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ದರ ಶತಕ ದಾಟಿದ್ದು, ವಾಹನ ಸಾವಾರರಿಗೆ ಶಾಕ್ ಮೇಳೆ ಸಾಕ್ ಎದುರಾಗಿದೆ. ಆದ್ರೆ ಇದೀಗ ಹಲವು ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿದೆ. ಇದೇ ಕಾರಣಕ್ಕೆ ತಂತ್ರಗಾರಿಕೆ ಹೂಡುತ್ತಿರುವ ಸರ್ಕಾರ ಪೆಟ್ರೋಲ್ ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು 5 ರೂ. ವರೆಗೆ ತಗ್ಗಿಸುವ ಚಿಂತನೆ ನಡೆಸಿದೆ ಎನ್ನಲಾಗ್ತಿದೆ. ಹೌದು ಶೀಘ್ರದಲ್ಲೇ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಚುನಾವಣೆಗೂ ಮೊದಲೇ ಕೇಂದ್ರವು ಸುಂಕವನ್ನು ಇಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಉಳಿದಂತೆ ರಾಜ್ಯ ಹಾಗೂ ದೇಶದಲ್ಲಿ ಪ್ರಸ್ತುತ ಪೆಟ್ರೋಲ್ ಹಾಗೂ ಡೀಸೆಲ್ ದರ ನೋಡಿದ್ರೆ ಕಳೆದ 5 ದಿನಗಳಿಂದ ದರ ಏರಿಕೆಯಾಗಲಿ ಕಡಿಮೆಯಾಗಲಿ ಆಗದೇ ಸ್ಥಿರವಾಗಿದೆ.
ಬೆಂಗಳೂರು: 94. 22 86.37
ದೆಹಲಿ: 91.17 81.47
ಮುಂಬೈ: 97.57 88.60
ಚೆನ್ನೈ: 93.11 86.45
ಕೋಲ್ಕತ್ತಾ: 91.35 84.35