ಬಿಗ್ ಬಾಸ್ 8 : ಧನುಶ್ರೀ – ದಿವ್ಯಾ ನಡುವೆ ಕಾಳಗ , ಗಾಯಗೊಂಡ ದಿವ್ಯಾ..!

1 min read

ಬಿಗ್ ಬಾಸ್ 8 : ಧನುಶ್ರೀ – ದಿವ್ಯಾ ನಡುವೆ ಕಾಳಗ , ಗಾಯಗೊಂಡ ದಿವ್ಯಾ..!

ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಜೋರಾಗಿದ್ದಾರೆ.  ಸಿಕ್ಕಾಪಟ್ಟೆ ರಫ್ ಅಂಡ್ ಟಫ್ ಆಗಿದ್ದು, ಮನೆಯಲ್ಲಿ ದಿನೇ ದಿನೇ ವಾತಾವರಣ ಬದಲಾಗ್ತಿದೆ. ಅಂದ್ಹಾಗೆ ಡೇಂಜರ್ ಝೋನ್ ನಿಂದ ತಪ್ಪಿಸಿಕೊಳ್ಳಲು  ಬಿಗ್ ಬಾಸ್ ನೀಡ್ತಿರುವ ಅವಕಾಶಗಳನ್ನ ಸ್ಪರ್ಧಿಗಳು ಸರಿಯಾಗಿಯೇ ಬಳಸಿಕೊಳ್ತಿದ್ಧಾರೆ. ಈಗಾಗಲೇ ನಿಧಿ , ಪ್ರಶಾಂತ್ ಸಂಬರ್ಗಿ, ಮಂಜು ತಮ್ಮ ನಾಮಿನೇಷನ್ ಅನ್ನ ಶುಬಾ ಪುಂಜಾ, ವಿಶ್ವನಾಥ್ ಹಾಗೂ ರಘು ಗೆ ವರ್ಗಾವಣೆ ಮಾಡಿದ್ದಾರೆ. ಇದೀಗ ಧನುಶ್ರೀಗೆ ಈ ಚಾನ್ಸ್ ಸಿಕ್ಕಿದೆ.

ಬಿಗ್ ಬಾಸ್ ಖೇಲ್ : ಕಹಾನಿ ಮೇ ಟ್ವಿಸ್ಟ್…! ಮೊದಲ ದಿನ ಸೇಫ್ ಅದ್ರೂ ಡೇಜಂರ್ ಝೋನ್ ಗೆ ಹೋಗಿದ್ಯಾಕೆ ಶುಭಾ..!

ಅಂದ್ರೆ ಇಂದು ರಿಲೀಸ್ ಆಗಿರುವ ಬಿಗ್ ಬಾಸ್ ಪ್ರೋಮೋ ನಿಜಕ್ಕೂ ಪ್ರೇಕ್ಷಕರನ್ನ ಬೆಚ್ಚಿ ಬೀಳಿಸಿದೆ. ಪ್ರೋಮೋದಲ್ಲಿ ಮಹಿಲಾ ಸ್ಪರ್ಧಿಗಳ ನಡುವೆ ಕಾಳಗವೇ ಏರ್ಪಟ್ಟಿರೋದನ್ನ ನೊಡಬಹುದು.  ಬಿಗ್ ಬಾಸ್ ಟಾಸ್ಕ್ ಒಂದನ್ನ ಕೊಟ್ಟಿದ್ದು, ಈ ಟಾಸ್ಕ್ ನಲ್ಲಿ ಗೆದ್ದವರು ಸೇಫ್ ಆಗಬಹುದು. ಸೋತವರು ಎಲಿಮಿನೇಷನನ್ ರೌಂಡ್ ಗೆ ಆಯ್ಕೆಯಾಗಬಹುದು.   ಹೀಗಾಗಿ ಧನುಶ್ರೀ ಹಾಗೂ ದಿವ್ಯಾ ಸುರೇಶ್ ನಡುವೆ ಕುಸ್ತಿ ಏರ್ಪಟ್ಟಿದೆ. ಆಟದಲ್ಲಿ ದಿವ್ಯಾ ಧನುಶ್ರೀ ಪರಸ್ಪರ ಎಳೆದಾಡಿಕೊಂಡು , ತಳ್ಳಾಡಿ , ಬೀಳಿಸಿದ್ದಾರೆ. ಇದ್ರಲ್ಲಿ ಧನುಶ್ರೀ ಶಕ್ತಿಶಾಲಿ ವಾರ್ ಗೆ ದಿವ್ಯಾ ಸೋತಿದ್ದಾರೆ ಎಂಬುದು ಮೇಲ್ನೋಟಕ್ಕೆ  ಗೊತ್ತಾಗಿದೆ. ಆದ್ರೆ ಈ ಕುಸ್ತಿಯಲ್ಲಿ ದಿವ್ಯಾ ಕಾಲಿಗೆ ಗಂಭೀರವಾಗಿ ಗಾಯವಾಗಿರೋದನ್ನ ಗಮನಸಿಬಹುದು. ಮನೆಯವರೆಲ್ಲಾ ಗಾಬರಿಯಾಗಿ ದಿವ್ಯಾ ಕಡೆ ಓಡಿಬಂದಿದ್ದು, ದಿವ್ಯಾ ಕಾಲಿನಿಂದ ತೀವ್ರವಾಗಿ ರಕ್ತ ಸುರಿಯುತ್ತಿದೆ ಎಂದೂ ಕೂಡ ಮಾತನಾಡಿಕೊಳ್ತಿರೋದನ್ನ ಕೇಳಬಹುದು. ಸದ್ಯ ನಿಜಕ್ಕೂ ನಡೆದಿದ್ದೇನು. ದಿವ್ಯಾ ಗಾಯಗೊಂಡಿದ್ದು ಹೇಗೆ . ಸೋತೋರು ಯಾರು ಗೆದದೋರು ಯಾರು. ಸೇಫ್ ಆದವರು ಯಾರು, ಡೇಂಜರ್ ಝೋನ್ ಗೆ ಹೋದೋರು ಯಾರು ಇಂದು ರಾತ್ರಿ ಎಲ್ಲದಕ್ಕೂ ತೆರೆಬೀಳಲಿದೆ. ಒಟ್ಟಾರೆ ಇಂದಿನ ಎಪಿಸೋಡ್ ರೋಚಕವಾಗಿರಲಿದ್ದು, ಪ್ರೇಕ್ಷಕರು ಕಾಯುತ್ತಿದ್ದಾರೆ.  

ಹಿಂದಿಗೆ ‘MAY I COME IN’ ಅಂತಿದ್ದಾರೆ ರಾಖಿ ಭಾಯ್..!   

‘ತೂಫಾನ್’ ಜೊತೆ ಟಕ್ಕರ್ ಮಾಡ್ತಾರಾ ‘ಸಲಾರ್’ : ಕೆಜಿಎಫ್ 2 ಅಭಿಮಾನಿಗಳಿಗೆ ಅನ್ಯಾಯ..? 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd