ಗೂಗಲ್, ಫೇಸ್ ಬುಕ್ ಗೆ ಸಮನ್ಸ್ ಜಾರಿ ಮಾಡಿದ ಸಂಸದೀಯ ಸಮಿತಿ
ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಗೂಗಲ್ ಗೆ ಸಂಸದೀಯ ಸಮಿತಿಯು ಸಮನ್ಸ್ ಜಾರಿ ಮಾಡಿದೆ.. ಆನ್ ಲೈನ್ ತಾಣಗಳಲ್ಲಿ ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಮತ್ತು ದುರುಪಯೋಗ ತಡೆಯುವ ವಿಚಾರವಾಗಿ ಫೇಸ್ ಬುಕ್ ಮತ್ತು ಗೂಗಲ್ ಅಧಿಕಾರಿಗಳಿಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್ ನೀಡಿದೆ.
ನಾಗರಿಕರ ಹಕ್ಕುಗಳನ್ನು ಕಾಪಾಡುವುದು, ಸಾಮಾಜಿಕ ಮಾಧ್ಯಮ, ಆನ್ ಲೈನ್ ಸುದ್ದಿ ಮಾಧ್ಯಮಗಳ ದುರ್ಬಳಕೆ ತಡೆ ಮತ್ತು ಡಿಜಿಟಲ್ ವೇದಿಕೆಯಲ್ಲಿ ಮಹಿಳೆಯರ ಭದ್ರತೆ ವಿಚಾರವಾಗಿ ‘ಫೇಸ್‌ಬುಕ್ ಇಡಿಯಾ’ ಮತ್ತು ‘ಗೂಗಲ್ ಇಂಡಿಯಾ’ ಪ್ರತಿನಿಧಿಗಳ ಅಭಿಪ್ರಾಯ ಕೇಳಲು ಸಮಿತಿ ಉದ್ದೇಶಿಸಿದೆ ಎನ್ನಲಾಗಿದೆ.
ಹೊಸ ಐಟಿ ನಿಯಮಗಳಲ್ಲಿ ಬಳಕೆದಾರರ ಖಾಸಗಿತನಕ್ಕೆ ಸಂಬಂಧಿಸಿದ ಕೆಲವು ಸೆಕ್ಷನ್‌ಗಳನ್ನು ಪ್ರಶ್ನಿಸಿ ವಾಟ್ಸ್‌ಆ್ಯಪ್ ನ್ಯಾಯಾಲಯದ ಮೆಟ್ಟಿಲೇರಿದೆ. ಇವುಗಳ ಅನುಷ್ಠಾನ ವಿಚಾರದಲ್ಲಿ ಟ್ವಿಟರ್ ಕೂಡ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದೆ.
ಕೊರೊನಾ ಸಂಕಷ್ಟ : 8 ಆರ್ಥಿಕ ನೆರವು ಘೋಷಿಸಿದ ಕೇಂದ್ರ ಸರ್ಕಾರ
ಮ್ಯಾನ್ಮಾರ್ ಸಂಘರ್ಷ : ಮಿಜೋರಾಂಗೆ ನುಸುಳಿದ 10,025 ಮ್ಯಾನ್ಮಾರ್ ಪ್ರಜೆಗಳು, ಒಂದೇ ವಾರದಲ್ಲಿ 700 ಮಂದಿ ಆಗಮನ
“ಮೊದಲು ಲಸಿಕೆ, ಆಮೇಲೆ ‘ಮನ್ ಕೀ ಬಾತ್” – ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ