ಹೊಸ ಆಪ್ ಲಾಂಚ್ ಮಾಡಿದ FaceBook…! ಏನಿದರ ವಿಶೇಷತೆಗಳು..?

1 min read

ಹೊಸ ಆಪ್ ಲಾಂಚ್ ಮಾಡಿದ FaceBook…! ಏನಿದರ ವಿಶೇಷತೆಗಳು..?

ಸಾಮಾಜಿಕ ಜಾಲತಾಣ FaceBook ಮತ್ತೊಂದು ಹೊಸ ಆಯಪ್ ಪರಿಚಯಿಸುತ್ತಿದೆ. ಇದಕ್ಕೆ ಹಾಟ್ಲೈನ್ ಎಂದು ಹೆಸರಿಟ್ಟಿದೆ. ಇದರ ಪ್ರಾಯೋಗಿಕ ಆಪ್ ಅಮೆರಿಕದಲ್ಲಿ ಈಗಾಗಲೇ ಲಾಂಚ್ ಆಗಿದ್ದು ಶೀಘ್ರದಲ್ಲೇ ಭಾರತ ಹಾಗೂ ವಿಶ್ವಾದ್ಯಂತ ಅಧಿಕೃತವಾಗಿಯೂ ಲಾಂಚ್ ಆಗಲಿದೆ.

ಏನಿದು ಹಾಟ್ಲೈನ್ / ವಿಶೇಷತೆಗಳೇನು..?
ಅಂದ್ಹಾಗೆ ಪ್ರಶ್ನೋತ್ತರ ಮಾದರಿ ಚರ್ಚೆ, ಸಂವಾದ / ಡಿಬೇಟ್ / ಸಂಭಾಷಣೆಗಾಗಿ ಹಾಟ್ಲೈನ್ ನನ್ನ ಸಿದ್ಧಪಡಿಸಲಾಗಿದೆ. ಇದರಲ್ಲಿ ಬರವಣೆಗೆ ಇಲ್ಲವೆ ಆಡಿಯೋ ಹಾಗೂ ವಿಡಿಯೋ ಮೂಲಕ ಪ್ರಶ್ನೆಗಳನ್ನು ಕೇಳುವ ಅವಕಾಶ ಇರುತ್ತದೆ. ನಿಮ್ಮ ಪ್ರಶ್ನೆಗಳಿಗೆ ಪರಿಣಿತರಿಂದ ಉತ್ತರ ದೊರೆಯಲಿದೆ. ಉದಾಹರಣೆಗೆ ಯಾವುದಾದರೂ ಬ್ಯುಸಿನೆಸ್ ಕುರಿತು ನಿಮಗೆ ಮಾಹಿತಿ ಬೇಕಾಗಿದ್ದರೆ ಅಥವಾ ಗೊಂದಲಗಳಿದ್ದರೆ ನೀವು ಹಾಟ್ಲೈನ್ನಲ್ಲಿ ಪ್ರಶ್ನಿಸಬಹುದು. ಅಲ್ಲಿ ನಿಮಗೆ ಅಗತ್ಯವಾದ ಉತ್ತರ ಸುಲಭವಾಗಿ ದೊರೆಯಲಿದೆ. ಅಲ್ಲದೇ ಹಾಟ್ಲೈನ್ ನಲ್ಲಿ ಲೈವ್ ವಿಡಿಯೋ ಹೋಸ್ಟ್ ಗೂ ಅವಕಾಶ ಇದೆ. ಇದರಲ್ಲಿ ನಿಮಗೆ ಬೇಕಾದವರ ಜೊತೆ ಚರ್ಚೆ ನಡೆಸಬಹುದು. ಅಶ್ಲೀಲ ಕಾಮೆಂಟ್, ಆಡಿಯೋ, ವಿಡಿಯೋಗಳನ್ನು ಡಿಲೀಟ್ ಮಾಡುವ ಅವಕಾಶ ಲೈವ್ ಹೋಸ್ಟ್ ಮಾಡುವರಿಗೆ ನೀಡಲಾಗಿದೆ.

ಪಾಕ್ ನಲ್ಲಿ ಕಿಡಿಗೇಡಿಗಳು ಧ್ವಂಸಗೊಳಿಸಿದ್ದ ಹಿಂದೂ ದೇಗುಲದ ಪುನರ್ ನಿರ್ಮಾಣಕ್ಕೆ 3.48 ಕೋಟಿ ರೂ. ಬಿಡುಗಡೆ..!

ನಾಳೆ ನಡೆಯಬೇಕಾಗಿದ್ದ ಕೆ-ಸೆಟ್ ಪರೀಕ್ಷೆ ಮುಂದೂಡಿಕೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd