ಗ್ಯಾಂಗ್ ರೇಪ್ ಕಥೆ ಕಟ್ಟಿದ ಯುವತಿ : ಮಾತು ನಂಬಿ ತನಿಖೆ ನಡೆಸಿದ 1000 ಪೊಲೀಸ್ರು..!
ಮುಂಬೈ : ಮಹಿಳೆಯರ ಮೇಲೆ ನಡೆಯುವಂತಹ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕುವ ಸಲುವಾಗಿ ನಾನಾ ಕಾನೂನುಗಳನ್ನ ವಿಶೇಷವಾಗಿ ಜಾರಿಗೆ ತರಲಾಗಿದೆ.. ಆದ್ರೆ ಕೆಲವರು ಇಂತಹ ಕಾನೂನನ್ನೇ ದುರುಪಯೋಗ ಪಡೆಸಿಕೊಳ್ತಿರೋದು ನಜಿಕ್ಕೂ ಬೇಸರದ ಸಂಗತಿ ಎನ್ನಬಹುದು..
ಇಂತಹದ್ದೇ ಒಂದು ಪ್ರಕರಣ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.. ಯುವತಿಯೊಬ್ಬಳು ತನ್ನ ಪ್ರೇಮಿಯನ್ನು ಮದುವೆಯಾಗಲು ಗ್ಯಾಂಗ್ ರೇಪ್ ಕಥೆ ಕಟ್ಟಿದ್ದ ಪರಿಣಾಮ ಸಾವಿರಾರು ಪೊಲೀಸರು ತನಿಖೆ ನಡೆಸಿದ್ದಾರೆ.. ಪ್ರಿಯಕರನ ಜೊತೆಗೆ ವಿವಾಹವಾಗಲು 19 ವರ್ಷದ ಯುವತಿ ತನ್ನ ಮೇಲೆ ಗ್ಯಾಂಗ್ ರೇಪ್ ನಡೆದಿರುವುದಾಗಿ ಸುಳ್ಳು ದೂರು ನೀಡಿದ್ದಾಳೆ. ಇದಕ್ಕಾಗಿ ನಾಗ್ಪುರ ಪೊಲೀಸ್ ಕಮಿಷನರ್ ಸೇರಿ 1 ಸಾವಿರ ಪೊಲೀಸರು ದಿನ ಪೂರ್ತಿ ತನಿಖೆ ನಡೆಸಿದ್ದಾರೆ.
ನಂತರ ಸಿ.ಸಿ.ಟಿವಿ ದೃಶ್ಯವಳಿಗಳಿಂದ ಆಕೆ ಸುಳ್ಳು ಕಥೆ ಕಟ್ಟಿರುವ ಸತ್ಯ ಬೆಳಕಿಗೆ ಬಂದಿದೆ. ಡಿಸೆಂಬರ್ 13 ರಂದು ಪೊಲೀಸ್ ಠಾಣೆಗೆ ಬಂದ ಯುವತಿ ವಿಳಾಸ ಕೇಳುವ ನೆಪದಲ್ಲಿ ನನ್ನನ್ನು ಅಪಹರಣ ಮಾಡಿದ್ದರು. ನಂತರ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಳು.
9 ವರ್ಷದ ಮಗಳ ಮೇಲೆಯೇ ಅತ್ಯಾಚಾರವೆಸಗಿದ ತಂದೆ
ಪೊಲೀಸರು 40 ತಂಡ ರಚಿಸಿ ತನಿಖೆ ಆರಂಭಿಸಿದ್ದು, 250 ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಈ ಸಮಯದಲ್ಲಿ ಅಪಹರಣ ಮಾಡಿದರು ಎಂದ ಸ್ಥಳದಿಂದ ಯುವತಿ ಸ್ಟೇಶನ್‍ಗೆ ಆಟೋದಲ್ಲಿ ಬಂದಿರುವುದು ಗೊತ್ತಾಗಿದೆ. ನಂತರ ಪೊಲೀಸರು ಯುವತಿಯನ್ನು ಪ್ರಶ್ನಿಸಿದಾಗ ಯುವತಿ ತನ್ನ ಪ್ರೇಮಿಯನ್ನು ಮದುವೆಯಾಗಲು ಗ್ಯಾಂಗ್ ರೇಪ್ ಕಥೆ ಕಟ್ಟಿರುವುದಾಗಿ ಹೇಳಿಕೊಂಡಿದ್ದಾಳೆ.