ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಖಾತೆ : ಫೇಸ್ ಬುಕ್ ನಲ್ಲಿ ಸಚಿವರ ಹೆಸರಲ್ಲಿ ಹಣ ದೋಚುತ್ತಾರೆ ಎಚ್ಚರ..!
ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರದಿದ್ದ ಗ್ಯಾಂಗ್ ಒಂದು ಜನರ ಬಳಿ ಹಣ ದೋಚುವ ಖತರ್ನಾಕ್ ಕೆಸದಲ್ಲಿ ತೊಡಗಿದ್ದಾರೆ. ಹೌದು ಸಚಿವರಿಗೆ 5 ಸಾವಿರ ಹಣದ ಅವಶ್ಯಕತೆ ಇದೆ. ಹೀಗೆಂದೇ ನಂಬಿಸಿ ನಕಲಿ ಫೇಸ್ ಬುಕ್ ಮೂಲಕ ಹಣ ಕೇಳುತ್ತಿದೆ ಈ ಗ್ಯಾಂಗ್ .
ಫೇಸ್ ಬುಕ್ ನಲ್ಲಿ ಸಚಿವರ ಹೆಸರಲ್ಲಿ ನಕಲಿ ಖಾತೆ ತೆರೆದು ಅದು ಸಚವಿರದ್ದೇ ಎಂದು ಬಿಂಬಿಸಲು ಹಲವಾರು ಫೋಟೋಗಳನ್ನ ಹಾಕಿ ಅನೇಕರನ್ನ ಈ ಗ್ಯಾಂಗ್ ನಂಬಿಸಿದೆ. ಅಷ್ಟೇ ಅಲ್ಲ ಈಗಾಗಲೇ ಅನೇಕರ ಜೊತೆಗೆ ಚಾಟ್ ಮಾಡಿ ಹಣ ಹಾಕುವಂತೆ ಒತ್ತಾಯ ಮಾಡಿರುವ ವಿಚಾರವೂ ಬಹಿರಂಗವಾಗಿದೆ.
5 ಸಾವಿರ ಹಣ ಹಾಕಿ ಸಂಜೆ ಕೊಡ್ತೀನಿ. ಅರ್ಜೆಂಟ್ ಇದೆ ಅನ್ನೋ ಮೆಸೇಜ್ ಗಳನ್ನ ಮಾಡಲಾಗಿದೆ. ಆದ್ರೆ ಸಚಿವರಿಗೆ ಹಣದ ಅವಶ್ಯಕತೆಯಿದೆ. ಅದಕ್ಕಾಗಿ ಇನ್ನೊಬ್ಬರ ಹತ್ತಿರ ಹಣ ಕೇಳ್ತಾರೆ ಅಂದ್ರೆ ನಂಬುವ ಮಾತ.
ಮೆಸೆಂಜರ್ ಮೂಲಕ ಚಾಟ್ ಮಾಡಿ ಗೂಗಲ್ ಪೇ ಮೂಲಕ ಹಣ ಕಳುಹಿಸಿ ಅಂತಾ ಸಾಕಷ್ಟು ಜನ್ರ ಬಳಿ ಹಣ ನೀಡುವಂತೆ ಒತ್ತಾಯಿಸಿರುವ ಈ ನಕಲಿ ಫೇಸ್ ಬುಕ್ ಖಾತೆಯ ಮೆಸೇಜ್ ಗಳ ಸ್ಕ್ರೀನ್ ಶಾಟ್ ಗಳು ಎಲ್ಲೆಡೆ ವೈರಲ್ ಆಗಿವೆ. ಸದ್ಯ ಈ ವಿಚಾರ ಇದೀಗ ಸಚಿವರ ಗಮನಕ್ಕೆ ಬಂದಿದ್ದು, ಅವರ ಪರ್ಸನಲ್ ಸೆಕ್ರೇಟರಿ ಡಿಜಿ ಗೆ ಈ ಬಗ್ಗೆ ದೂರು ಸಲ್ಲಿಕೆ ಮಾಡಿದ್ದಾರೆ. ಸಿಐಡಿ ಸೈಬರ್ ಸೆಲ್ ನಲ್ಲಿ ದೂರು ದಾಖಲಾಗಿದ್ದು, ನಕಲಿ ಫೇಸ್ ಬುಕ್ ಖಾತೆ ತೆರದವರ ಹುಡುಕಾಟ ನಡೆಸಲಾಗ್ತಿದೆ. ಅಷ್ಟೇ ಅಲ್ಲ ಇದೇ ರೀತಿಯಲ್ಲಿ ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳ ಹೆಸರಲ್ಲಿಯೂ ನಕಲಿ ಫೇಸ್ ಬುಕ್ ಖಾತೆ ತೆರೆದಿರುವ ಶಂಕೆ ವ್ಯಕ್ತವಾಗಿದೆ.