ಇಂದು ರಾಮನಗರ ಬಂದ್ : ಸೆಕ್ಷನ್ 144 ಜಾರಿ..!
ರಾಮನಗರ : ರೇಷ್ಮೆ ನಗರಿ ರಾಮನಗರದಿಂದ ರೇಷ್ಮೆ ಗೂಡು ಮಾರುಕಟ್ಟೆ ಸ್ಥಳಾಂತರ ಹಾಗೂ ನಗರಸಭೆ ಕಾರ್ಯವೈಖರಿಯನ್ನ ಖಂಡಿಸಿ ಇಂದು ರಾಮನಗರ ಬಂದ್ ಗೆ ಕರೆ ನೀಡಲಾಗಿದೆ. ಜನ ಜಾಗೃತಿ ವೇದಿಕೆ, ವಿವಿಧ ಸಂಘಟನೆಗಳಿಂದ ಬಂದ್ ಗೆ ಕರೆ ಕೊಡಲಾಗಿದ್ದು, ವೇದಿಕೆಯ ಅಧ್ಯಕ್ಷ ಕೆ.ಶೇಷಾದ್ರಿ ಪ್ರತಿಭಟನೆಯ ನೇತೃತ್ವವನ್ನ ವಹಸಿಕೊಂಡಿದ್ದಾರೆ.
ಪಿಗ್ಮೆಂಟೇಶನ್ ಸಮಸ್ಯೆಗೆ ಮನೆಮದ್ದುಗಳು
ಅಲ್ಲದೇ ಬೆಳಿಗ್ಗೆ 11 ಗಂಟೆಯಿಂದಲೇ ರಾಮನಗರದ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿರುವ ಪ್ರತಿಭಟನಾಕಾರರು ನಗರಸಭೆಯಲ್ಲಿ ನಡೆಯುತ್ತಿರುವ ಅಕ್ರಮ ನಿಲ್ಲಬೇಕು. ಏಷ್ಯಾದಲ್ಲೇ ಅತಿದೊಡ್ಡ ರೇಷ್ಮೆಗೂಡು ಮಾರುಕಟ್ಟೆ ಸ್ಥಳಾಂತರ ಮಾಡುವುದನ್ನ ಕೈ ಬಿಡಬೇಕು ಎಂದು ಆಗ್ರಹಿಸಿ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಮುಂಜಾಗ್ರತಾ ಕ್ರಮವಾಗಿ ರಾಮನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ರಾಮನಗರ ತಾಹಶೀಲ್ದಾರ್ ನರಸಿಂಹಮೂರ್ತಿ ಆದೇಶ 144 ಸೆಕ್ಷನ್ ಜಾರಿಗೆ ಆದೇಶ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ಥ್ ನಿಯೋಜಿಸಲಾಗಿದೆ.