ಡ್ರೈನೇಜ್ ನಲ್ಲಿ ತಂದೆಯ ಅಸ್ಥಿ ವಿಸರ್ಜನೆ ಮಾಡಿದ ಮಗ
ಲಂಡನ್ : ಕುಟುಂಬವೊಂದು ತಮ್ಮ ತಂದೆಯ ಕೊನೆಯ ಆಸೆ ಈಡೇರಿಸಲು ಆತನ ಅಸ್ಥಿಯನ್ನು ಡ್ರೈನೇಜ್ ನಲ್ಲಿ ವಿಸರ್ಜನೆ ಮಾಡಿದೆ.
ಹೌದು..! ಕೆವಿನ್ ಮೆಕ್‍ಗ್ಲಿಂಚಿ ಎಂಬ 66 ವರ್ಷದ ವೃದ್ಧ ಪಬ್ ಗಳನ್ನ ತುಂಬಾ ಇಷ್ಟಪಡುತ್ತಿದ್ದರು. ಅದರಲ್ಲೂ ಕೆವಿನ್ ಮೆಕ್‍ಗ್ಲಿಂಚಿ ಕೋವೆಂಟ್ರಿಯಲ್ಲಿರುವ ‘ಹೋಲಿ ಬುಷ್’ ಪಬ್ ಅನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದರು.
ಪ್ರತಿದಿನ ಅಲ್ಲಿಗೆ ಹೋಗಿ ತಣ್ಣನೆಯ ಬಿಯರ್ ಕುಡಿಯುತ್ತಾ ಎಂಜಾಯ್ ಮಾಡುತ್ತಿದ್ದರು.
ಹೇಗೆ ಮುಂದುವರಿದು ತನ್ನ ಕೊನೆಯ ದಿನಗಳಲ್ಲಿ ಕೆವಿನ್, ತನ್ನ ಕುಟುಂಬಸ್ಥರನ್ನು ಕರೆದು ತನ್ನ ವಿಚಿತ್ರ ಕೋರಿಕೆಯನ್ನು ಹೇಳಿಕೊಂಡಿದ್ದನು.
ಅದೇನಂದ್ರೆ ತನ್ನ ಮರಣದ ನಂತರ ಚಿತಾಭಸ್ಮವನ್ನು ಪಬ್ ನ ಮುಂದೆ ಇರುವ ಡ್ರೈನೇಜ್ ನಲ್ಲಿ ವಿಸರ್ಜಿಸಬೇಕು ಅಂತಾ ಕೊನೆಯ ಆಸೆಯನ್ನ ಹೇಳಿಕೊಂಡಿದ್ದರು.
ಇದರಿಂದ ಕುಟುಂಬಸ್ಥರು ಮೊದಲು ಆಶ್ಚರ್ಯಚಕಿತರಾದ್ರೂ ಬಳಿಕ ಆತನ ಕೋರಿಕೆಯನ್ನ ಅರ್ಥ ಮಾಡಿದ್ದಾರೆ.
ಹಾಗೇ ಕೆವಿನ್ ಅವರ ಮೊದಲ ಜಯಂತಿಯಂದು ಕೆವಿನ್ ಮಗ ಓವನ್, ಮಗಳು ಕ್ಯಾಸಿಡಿ ಮತ್ತು ಇತರ ಕುಟುಂಬ ಸದಸ್ಯರು ಹೋಲಿಬಷ್ ಪಬ್ ಅನ್ನು ಬಳಿ ಸೇರಿದ್ದಾರೆ.
ಈ ವೇಳೆ ಓವನ್ ತಂದೆ ಚಿತಾಭಸ್ಮವನ್ನು ಒಂದು ಲೋಟ ಬಿಯರ್‍ಗೆ ಬೆರೆಸಿ ಪಬ್‍ನ ಮುಂಭಾಗದ ಒಳಚರಂಡಿಗೆ ಸುರಿದಿದ್ದಾರೆ. ಇದರೊಂದಿಗೆ ಕೆವಿನ್ ಕೊನೆ ಆಸೆಯನ್ನ ನೆರವೇರಿಸಿದ್ದಾರೆ.
ಇದರ ಬಗ್ಗೆ ಓವನ್ ಮಾತನಾಡುತ್ತಾ, “ನಮ್ಮ ತಂದೆ ಹೋಲಿ ಬುಷ್ ಪಬ್‍ನೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದರು”. ಅವರು ಪ್ರತಿದಿನ ಅಲ್ಲಿಗೆ ಹೋಗುತ್ತಿದ್ದರು. ಆಗಾಗ್ಗೆ ಅಲ್ಲಿನ ಒಳಚರಂಡಿಯಲ್ಲಿ ಏನನ್ನಾದರೂ ಹಾಡುತ್ತಿದ್ದರು.
ಅವರು ತನ್ನ ಚಿತಾಭಸ್ಮವನ್ನು ಒಳಚರಂಡಿಯಲ್ಲಿ ಏಕೆ ವಿಸರ್ಜನೆ ಮಾಡಿ ಎಂದು ಹೇಳಿದ್ದಾರಂದರೇ ನಾವು ಅಲ್ಲಿಗೆ ಹೋದಾಗಲೆಲ್ಲಾ ನಮಗೆ ಅವರು ನೆನಪಾಗಬೇಕು ಅನ್ನೋ ಉದ್ದೇಶದಿಂದ ಅಂತಾ ಹೇಳಿದ್ದಾರೆ.
