ಹಾವೇರಿ: ಸಾವನ್ನಪ್ಪಿದ ಮಕ್ಕಳನ್ನು ಬದುಕಿಸುವುದಕ್ಕಾಗಿ ಕುಟುಂಬಸ್ಥರು ಉಪ್ಪಿನ ರಾಶಿಯಲ್ಲಿ ಮೃತದೇಹ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದ ವಿಡಿಯೋ ನೋಡಿ ಕುಟುಂಬಸ್ಥರು ಈ ರೀತಿ ಮಾಡಿದ್ದಾರೆ. ಈ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗಾಳಪೂಜಿ ಗ್ರಾಮದಲ್ಲಿ ನಡೆದಿದೆ. ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಮಕ್ಕಳನ್ನು ಉಪ್ಪಿನ ರಾಶಿಯಲ್ಲಿ ಮುಚ್ಚಿದರೆ ಮುಳುಗುತ್ತಾರೆಂದು ಸತತ 6 ಗಂಟೆಗಳ ಕಾಲ ಉಪ್ಪಿನ ಗುಡ್ಡೆಯಲ್ಲಿ ಮೃತದೇಹ ಇಟ್ಟು ಬದುಕಿಸುವ ಪ್ರಯತ್ನ ಮಾಡಿದ್ದರು.
ಮೃತದೇಹ ಪತ್ತೆಯಾಗುತ್ತಿದ್ದಂತೆ ಮನೆಗೆ ತಂದು ಉಪ್ಪುರಾಶಿ ಹಾಕಿ ಪೋಷಕರು ಬದುಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಸುಳ್ಳು ಸುದ್ದಿ ನಂಬಿ ಪಾಲಕರು ಹೀಗೆ ಮಾಡಿದ್ದರು. ನಂತರ ಪೊಲೀಸರು ಮನವೊಲಿಸಿದ ನಂತರ ಮಕ್ಕಳ ಅಂತ್ಯಕ್ರಿಯೆ ಮಾಡಲಾಗಿದೆ. ಈ ಘಟನೆ ಕಾಗಿನಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.