ಕುಟುಂಬ ರಾಜಕಾರಣ ಎಲ್ಲಾ ಪಾರ್ಟಿಯಲ್ಲಿ ಏಡ್ಸ್ ರೋಗದಂತೆ ಹಬ್ಬಿದೆ : ಯತ್ನಾಳ್
ಕಲಬುರಿಗಿ: ಪ್ರಧಾನಿ ಮೋದಿ ಕುಟುಂಬ ರಾಜಕಾರಣ ವಿರುದ್ಧ ಅಭಿಯಾನ ಆರಂಭಿಸಿದ್ದು, ಈ ಅಭಿಯಾನ ಒಂದು ಒಳ್ಳೆಯ ಬೆಳವಣಿಗೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕುಟುಂಬ ರಾಜಕಾರಣ ಎಲ್ಲಾ ಪಾರ್ಟಿಯಲ್ಲಿ ಏಡ್ಸ್ ರೋಗದಂತೆ ಹಬ್ಬಿದೆ. ಒಬ್ಬರೇ ನಾಯಕರ ಮನೆಯಲ್ಲಿ ನಾಲ್ಕು ಮಂದಿ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಇನ್ನೂ ನಾಯಕತ್ವ ಬದಲಾವಣೆ ಮಾಡೋದು ಬಿಡೋದು ವರಿಷ್ಠರಿಗೆ ಬಿಟ್ಟಿದ್ದು. ಎಲ್ಲಿ ಅವಶ್ಯಕತೆ ಬೀಳುತ್ತದೋ ಅಲ್ಲಿ ನಾಯಕತ್ವ ಬದಲಾವಣೆ ಮಾಡುತ್ತದೆ. ಲಾಭಿ ಮಾಡೋದು, ಹಣದ ಪೆಟ್ಟಿಗೆ ತಗೊಂಡು ದೆಹಲಿಗೆ ಹೋಗೋದು ಈಗ ಬಿಜೆಪಿಯಲ್ಲಿ ಇಲ್ಲಾ ಎಂದು ವ್ಯಂಗ್ಯವಾಡಿದರು.









