ಭುವನೇಶ್ವರ: ಖ್ಯಾತ ಒಡಿಶಾ ಗಾಯಕಿ (Odisha Singer) ರುಕ್ಸಾನಾ ಬಾನು(27) ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಗಾಯಕಿ ರುಕ್ಸಾನಾ ಬಾನು ಭುವನೇಶ್ವರದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಪಡೆಯುತ್ತಿದ್ದಾಗಲೇ ಸಾವನ್ನಪ್ಪಿದ್ದಾರೆ.
ರುಕ್ಸಾನಾ ಸ್ಕ್ರಬ್ ಟೈಫಸ್ (Scrub Typhus) (ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆ)ಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ, ಅವರಿಗೆ ಇತ್ತೀಚೆಗೆ ಬೆದರಿಕೆ ಕರೆ ಹೆಚ್ಚಾಗಿ ಬರುತ್ತಿದ್ದವು ಎನ್ನಲಾಗಿದೆ. ತನ್ನ ಪ್ರತಿಸ್ಪರ್ಧಿ ಗಾಯಕನಿಂದಾಗಿ ವಿಷ ಸೇವಿಸಿದ್ದಾರೆ ಎಂದು ಕೂಡ ಕುಟುಂಬಸ್ಥರು ಆರೋಪಿಸಿದ್ದಾರೆ. ಹೀಗಾಗಿ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸುಮಾರು 15 ದಿನಗಳ ಹಿಂದೆ ರುಕ್ಸಾನಾ ಶೂಟಿಂಗ್ ಸಂದರ್ಭದಲ್ಲಿ ಜ್ಯೂಸ್ ಕುಡಿದು ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು ಎಂದು ಕೂಡ ಕುಟುಂಬಸ್ಥರು ಹೇಳಿದ್ದಾರೆ. ಸದ್ಯ ಪೊಲೀಸ್ ತನಿಖೆಯ ನಂತರವೇ ನಿಖರ ಮಾಹಿತಿ ತಿಳಿಯಬೇಕಿದೆ.