ಪಂಚಭೂತಗಳಲ್ಲಿ ಲೀನವಾದ ಸ್ವರ ಸಾಮ್ರಾಜ್ಞಿ ಲತಾ ಮಂಗೇಶ್ಕರ್
ಗಾನ ಕೋಗಿಲೆ, ಸ್ವರ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಲತಾ ಜಿ ಅವರ ಸಹೋದರ ಹೃದಯನಾಥ್ ಮಂಗೇಶ್ಕರ್ ಅವರ ಪುತ್ರ ಆದಿತ್ಯ ಅಗ್ನಿಸ್ಪರ್ಶ ನೆರೆವೆರಿಸುವ ಮೂಲಕ ಕೊನೆಯ ವಿಧಿ ವಿಧಾನಗಳನ್ನ ನೆರವೇರಿಸಿದ್ದಾರೆ.
ಇದಕ್ಕೂ ಮುನ್ನ ಸೇನಾ ಸಿಬ್ಬಂದಿ ಲತಾ ಜೀ ಅವರ ದೇಹಕ್ಕೆ ತ್ರಿವರ್ಣ ಧ್ವಜ ಹೊದಿಸಿ ಪ್ರಭಾಕುಂಜ್ ಮನೆಯಿಂದ ಹೊರಗೆ ತರಲಾಯಿತು. ಸೇನೆ, ನೌಕಾಪಡೆ, ವಾಯುಸೇನೆ ಹಾಗೂ ಮಹಾರಾಷ್ಟ್ರ ಪೊಲೀಸರು ಪಾರ್ಥಿವ ಶರೀರಕ್ಕೆ ಭುಜ ನೀಡಿದರು. Farewell, nightingale: Lata Mangeshkar’s final journey
ಪಾರ್ಥಿವ ಶರೀರವನ್ನ ಸೇನೆಯ ಟ್ರಕ್ನಲ್ಲಿ ಹೂಗಳಿಂದ ಅಲಂಕರಿಸಿ ಶಿವಾಜಿ ಪಾರ್ಕ್ಗೆ ಕರೆತರಲಾಗಿತ್ತು. ಮುಂಬೈನ ಸಾವಿರಾರು ಜನರು ಲತಾ ತಾಯಿಗೆ ತಮ್ಮ ಕೊನೆಯ ವಿದಾಯ ಹೇಳಲು ಹೆಜ್ಜೆ ಹಾಕಿದರು. ಮಧ್ಯಾಹ್ನ 1.10ಕ್ಕೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಲತಾ ಅವರ ಪಾರ್ಥಿವ ಶರೀರ ಅವರ ಮನೆಗೆ ತಲುಪಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಶಿವಾಜಿ ಪಾರ್ಕ್ನಲ್ಲಿ ಗಾನ ಕೋಗಿಲೆ ಅವರಿಗೆ ನಮನ ಸಲ್ಲಿಸಿ ಬಳಿಕ ಶಿವಾಜಿ ಪಾರ್ಕ್ನಿಂದ ಹೊರಟರು. ಶಾರುಖ್ ಖಾನ್ ಮತ್ತು ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ನಟರು, ರಾಜಕಾರಣಿಗಳು ಮತ್ತು ಚಿತ್ರರಂಗದವರು ಇಲ್ಲಿ ಉಪಸ್ಥಿತರಿದ್ದರು.