ಎಂಟು ದಶಕಗಳಿಗೂ ಹೆಚ್ಚು ಕಾಲ ಮುಂಬಯಿ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಅನುಕೂಲವಾಗಿದ್ದ ಐಕಾನಿಕ್ ಕೆಂಪು ಡಬಲ್ ಡೆಕ್ಕರ್ ಬಸ್‌ಗಳು ಸ್ಥಗಿತಗೊಳ್ಳಲಿವೆ ಎಂದು ವರದಿಯೊಂದು ತಿಳಿಸಿದೆ.
1990 ರ ದಶಕದಿಂದಲೂ ಪ್ರವಾಸಿಗರಿಗೆ ದೃಶ್ಯವೀಕ್ಷಣೆಯ ಬಸ್‌ಗಳಾಗಿ ಸೇವೆ ಸಲ್ಲಿಸಿದ ಓಪನ್-ಡೆಕ್ ಡಬಲ್ ಡೆಕ್ಕರ್ ಬಸ್‌ಗಳು ಅಕ್ಟೋಬರ್ ಮೊದಲ ವಾರದಲ್ಲಿ ನಗರದ ಬೀದಿಗಳಿಂದ ಕಣ್ಮರೆಯಾಗಲಿವೆ ಎಂದು ವರದಿ ತಿಳಿಸಿದೆ.
ಮೂರು ತೆರೆದ ಡೆಕ್ ಬಸ್‌ಗಳು ಸೇರಿದಂತೆ ಕೇವಲ ಏಳು ಡಬಲ್ ಡೆಕ್ಕರ್ ಬಸ್‌ಗಳನ್ನು ಸಂರಕ್ಷಣೆ ಮಾಡಲಾಗುತ್ತದೆ. ಈ ವಾಹನಗಳು ತಮ್ಮ ಪ್ರಯಾಣದ 15 ವರ್ಷಗಳನ್ನು ಪೂರೈಸುತ್ತಿರುವುದರಿಂದ ಡಬಲ್ ಡೆಕ್ಕರ್ ಬಸ್‌ಗಳು ಸೆಪ್ಟೆಂಬರ್ 15 ರಿಂದ ಶಾಶ್ವತವಾಗಿ ರಸ್ತೆಯಿಂದ ಹೊರಗುಳಿಯಲಿವೆ ಎನ್ನಲಾಗಿದೆ.