Haveri | ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ
1 min read
Farmer suicide in Haveri saaksha tv
Haveri | ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ
ಹಾವೇರಿ : ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ. 55 ವರ್ಷದ ವಾಸಪ್ಪ ಮೃತ ರೈತರಾಗಿದ್ದಾರೆ.
ಮರಕ್ಕೆ ಟವಲ್ ನಿಂದ ಕುಣಿಕೆ ಕಟ್ಟಿ ವಾಸಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಾಸಪ್ಪ ಬಸಪ್ಪ ರಂಗರೆಡ್ಡಿ 4 ಎಕರೆ ಜಮೀನು ಹೊಂದಿದ್ದು , ಸಾಲ ಮಾಡಿ ಬೆಳೆ ಬೆಳೆದಿದ್ದರು.
ಆದ್ರೆ ಸಕಾಲದಲ್ಲಿ ಮಳೆಯಾಗದೇ ಬಿತ್ತಿದ ಮೆಕ್ಕೆಜೋಳ ಕೂಡಾ ಹಾನಿಯಾಗಿತ್ತು
ಇದರಿಂದ ಮನನೊಂದು ವಾಸಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸಂಬಂಧ ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.