ಬಾಗಲಕೋಟೆ: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ (Heavy Rain) ರೈತರೊಬ್ಬರು ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಕೊಚ್ಚಿ ಹೋಗಿ ರೈತ (Farmer) ಸಾವನ್ನಪ್ಪಿರುವ ಘಟನೆ ಹುನಗುಂದ ತಾಲ್ಲೂಕಿನ ಮೂಗನೂರಿನಲ್ಲಿ ನಡೆದಿದೆ. ಮಲ್ಲಪ್ಪ ಶಿವಪ್ಪ ಬಸವನಾಳ(38) ಸಾವನ್ನಪ್ಪಿದ ದುರ್ದೈವಿ. ಸಾವನ್ನಪ್ಪಿರುವ ರೈತರು ಮೂಗನೂರು ಗ್ರಾಮದಿಂದ ಸ್ವಗ್ರಾಮ ಅಂಬಲಿಕೊಪ್ಪಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದರು.
ಬೈಕ್ ನಲ್ಲಿ ಸೇತುವೆ ದಾಟುವಾಗ ನೀರಲ್ಲಿ ಕೊಚ್ಚಿ ಹೋಗಿದ್ದರು. ಬೈಕ್ ಸೇತುವೆ ಮೇಲೆ ಬಿದ್ದಿದ್ದರೆ ಹಳ್ಳದ ಪಕ್ಕದ ಮುಳ್ಳು ಕಂಟಿಯಲ್ಲಿ ರೈತನ ಶವ ಪತ್ತೆಯಾಗಿದೆ. ಈ ಕುರಿತು ಅಮಿನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.