ಪ್ರವಾಹ ಬಂದ ವೇಳೆ ರೈತರಿಗೆ ದುಪ್ಪಟ್ಟು ಪರಿಹಾರ ನೀಡಿದ್ದೇವೆ: ಸಿಎಂ ಬೊಮ್ಮಾಯಿ Saaksha Tv
ಬೆಂಗಳೂರು: ಈ ಹಿಂದೆ ಬರಗಾಲ, ಮಳೆಗಾಲ ಬಂದಿತ್ತು. ಆದರೆ ಪ್ರವಾಹ ಹಾಗೂ ಆರೋಗ್ಯದ ತುರ್ತು ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಆರು ತಿಂಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೇಟ್ ಹಾಲ್‌ನಲ್ಲಿ ಸಾಧನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಹಿಂದೆ ಬರಗಾಲ, ಮಳೆಗಾಲ ಬಂದಿತ್ತು. ಆದರೆ ಪ್ರವಾಹ ಹಾಗೂ ಆರೋಗ್ಯದ ತುರ್ತು ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಕೊರೊನಾ ಆರ್ಥಿಕವಾಗಿ ದುಷ್ಪರಿಣಾಮ ಬೀರಿದೆ ಎಂದು ಹೇಳಿದರು.
ಕಷ್ಟ ಬಂದರೂ ನಮ್ಮ ಸರಕಾರ ಮಾನವೀಯತೆ ಬಿಟ್ಟು ಕೊಟ್ಟಿಲ್ಲ. ಪ್ರವಾಹ ಬಂದ ವೇಳೆ ರೈತರಿಗೆ ದುಪ್ಪಟ್ಟು ಪರಿಹಾರ ನೀಡಿದ್ದೇವೆ. ಅಂತಃಕರಣದ ಸರ್ಕಾರ ನಮ್ಮದು. ಅಂಗವಿಕಲರಿಗೆ, ವಿಧವೆಯರಿಗೆ, ಹಿರಿ ಜೀವಿಗಳ ಊರುಗೋಲಾಗಿ ಸರ್ಕಾರ ನಡೆಸಿದ್ದೇವೆ ಎಂದರು.
ಅಲ್ಲದೇ ಉದ್ಯೋಗ ಸೃಷ್ಟಿಯಾಗಬೇಕು, ಹೆಣ್ಣುಮಕ್ಕಳಿಗೆ ಸಬಲಗೊಳಿಸಬೇಕು, ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಬೇಕು ಎಂಬ ಆಸೆ ಇದೆ. ಆದರೆ ಆರ್ಥಿಕ ಸಂಕಷ್ಟ ನಮ್ಮನ್ನು ಜಿಜ್ಞಾಸೆಗೆ ದೂಕುತ್ತಿದೆ. ಆದರೆ ನಮ್ಮ ಸರಕಾರ ಒಂದೊಂದೇ ಹೆಜ್ಜೆ ಇಟ್ಟು ಅರಿವಿನೊಂದಿಗೆ ಸರಕಾರ ನಡೆಸಿದ್ದೇವೆ ಎಂದರು.