ಫೆಬ್ರವರಿ 15 ರಿಂದ ದೇಶಾದ್ಯಂತ `FASTAG’ ಕಡ್ಡಾಯ
ನವದೆಹಲಿ : ಫೆಬ್ರವರಿ 15 ರಿಂದಲೇ ದೇಶಾದ್ಯಂತ ಫಾಸ್ಟ್ಯಾಗ್ ಜಾರಿಗೆ ಬರಲಿದೆ. ಕೊರೊನಾ ಹಾವಳಿ ಸೇರಿ ವಿವಿಧ ಕಾರಣಗಳಿಂದ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಈ ವ್ಯವಸ್ಥೆ ಜಾರಿಯ ದಿನಾಂಕವನ್ನು ಈ ಬಾರಿ ಯಾವುದೇ ಕಾರಣಕ್ಕೂ ಮುಂದೂಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಫೆಬ್ರವರಿ 15 ರಿಂದ ಟೋಲ್ ಗೇಟ್ ಗಳಲ್ಲಿ ಸಂಪೂರ್ಣವಾಗಿ ಫಾಸ್ಟ್ ಟ್ಯಾಗ್ ಪಾವತಿ ಕಡ್ಡಾಯ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ರಾಷ್ಟ್ರೀಯ ಹದ್ದಾರಿ ಪ್ರಾಧಿಕಾರದ ಪ್ರಕಾರ, ಪ್ರಸ್ತುತ ದೇಶಾದ್ಯಂತ ಒಟ್ಟು ಶೇ. 75 ರಿಂದ 80 ರಷ್ಟು ಫಾಸ್ಟ್ಯಾಗ್ ಮೂಲಕ ಪಾವತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 15 ರಿಂದ ಸಂಪೂರ್ಣವಾಗಿ ಟೋಲ್ ಗೇಟ್ ಗಳಲ್ಲಿ ನಗದು ರಹಿತವಾಗುವ ಮೂಲಕ ಶೇ. 100 ರಷ್ಟು ಫಾಸ್ಟ್ಯಾಗ್ ಮೂಲಕ ಪಾವತಿಯಾಗುವಂತೆಯಾಗಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಸೂಪರ್ ಜೆಟ್ ವೇಗದಲ್ಲಿ ತೈಲ ಬೆಲೆ ಏರಿಕೆ : ರಾಜ್ಯದಲ್ಲಿ ಬೆಂಗಳೂರಲ್ಲಿ ಎಷ್ಟು ಗೊತ್ತಾ..?
ಕೊರೊನಾ ಲಸಿಕೆ ಪಡೆದ ಬಳಿಕ ಮೃತಪಟ್ಟ ಸ್ವಯಂಸೇವಕಿ : ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ
ಸೈಬರ್ ಪ್ರಪಂಚದ ಮೇಲೆ ಕಣ್ಣಿಡಲು ಸೈಬರ್ ಕ್ರೈಮ್ ಸ್ವಯಂಸೇವಕರಾಗುವಂತೆ ಜನರಲ್ಲಿ ಸರ್ಕಾರದ ಮನವಿ
ಮತ್ತೆ ಸದ್ದು ಮಾಡಿದ `ಹೌದೋ ಹುಲಿಯಾ’..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel