Father in Law Married son’s wife : 28 ರ ಸೊಸೆಯನ್ನೇ ವರಿಸಿದ 70ರ ಮಾವ
70 ವರ್ಷದ ಮಾವನನ್ನೇ ಮದುವೆಯಾದ 28 ರ ಸೊಸೆ
ಮೊದಲ ಪತಿ ತೀರಿಕೊಂಡ ನಂತರ 2ನೇ ವಿವಾಹ
2ನೇ ಮದುವೆಯೂ ಇಷ್ಟವಿಲ್ಲದೇ ಗಂಡನ ಮನೆಗೆ ವಾಪಸ್
ಇದೀಗ 3ನೇ ಬಾರಿಗೆ ಮಾಜಿ ಪತಿಯ ತಂದೆಯ ಜೊತೆ ಮದುವೆ
ಉತ್ತರಪ್ರದೇಶದ ಗೋರಖ್ ಪುರದಲ್ಲಿ ವಿಲಕ್ಷಣ ಘಟನೆ
70 ವರ್ಷದ ವ್ಯಕ್ತಿಯು ತನ್ನ ಮಗನ ಪತ್ನಿಯನ್ನೇ ಪ್ರೀತಿಸಿ ಮದುವೆಯಾಗಿರುವ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ…
ಮೊದಲ ಪತಿ ತೀರಿಕೊಂಡ ನಂತರ 28 ವರ್ಷದ ಸೊಸೆ ಪೂಜಾ 2 ನೇ ಮದುವೆಯಾಗಿದ್ದಳು.. ಆದ್ರೆ 2 ನೇ ಪತಿ ಇಷ್ಟವಾಗದೇ ವಾಪಸ್ ಬಂದಾಗ ಆಕೆಯನ್ನ ಮಾವ 70 ವರ್ಷದ ಕೈಲಾಶ್ ಯಾದವ್ ಮದುವೆಯಾಗಿದ್ದು , ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ..
ಗೋರಖ್ ಪುರದ ಛಾಪಿಯಾ ಉಮ್ರಾವ್ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ..
ಬದಲ್ ಗಂಜ್ ಕೊಟ್ವಾಲಿ ಪ್ರದೇಶದ ಛಾಪಿಯಾ ಉಮ್ರಾವ್ ಗ್ರಾಮದಲ್ಲಿ ಮದುವೆ ನಡೆದಿದೆ.
ಕೈಲಾಶ್ ಯಾದವ್ ಬದಲ್ ಗಂಜ್ ಪೊಲೀಸ್ ಠಾಣೆಯಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡ್ತಿದ್ದಾರೆ. ಕೈಲಾಶ್ ಪತ್ನಿ 12 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಕೈಲಾಶ್ ಅವರ ನಾಲ್ವರು ಮಕ್ಕಳಲ್ಲಿ ಮೂರನೇ ಮಗ, ಪೂಜಾಳನ್ನ ವಿವಾಹವಾಗಿದ್ದರು. ಆದರೆ ಪೂಜಾ ಪತಿ ಕೆಲ ವರ್ಷದ ಹಿಂದೆಯೇ ಸಾವನ್ನಪ್ಪಿದ್ದರು.
ಇದಾದ ನಂತರ ಪೂಜಾ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದರು. ಆದರೆ ಆಕೆಗೆ ಆ ಮದುವೆ ಇಷ್ಟವಿರಲಿಲ್ಲ.
ಇದಾದ ನಂತರ ಪೂಜಾ ಅಲ್ಲಿಂದ ಹೊರಟು ಗಂಡನ ಮನೆಗೆ ವಾಪಸ್ ಬಂದಿದ್ದಳು.
ಈ ನಡುವೆ ಮಾವನಿಗೆ ಸೊಸೆಯ ಮೇಲೆ ಪ್ರೀತಿ ಶುರುವಾಗಿದ್ದು, ಪರಸ್ಪರ ಒಪ್ಪಿ ಮದುವೆಯಾಗಿದ್ದಾರೆ.
70 year old Man married daughter inlaw in up