ಮಾವನನ್ನ ನಂಬಿ ಹೈದ್ರಾಬಾದ್ ಗೆ ಬಂದಿದ್ದ ಸೊಸೆ ಮೇಲೆ ಅತ್ಯಾಚಾರ..!
ತಂದೆ ಸಮಾನನಾಗಿರಬೇಕಾಗಿದ್ದ ಮಾವನೊಬ್ಬ ತನ್ನ ಸೊಸೆಯ ಮೇಲೆಯೇ ಪೈಶಾಚಿಕ ಕೃತ್ಯವೆಸಗಿದ್ದು, ತನ್ನ ಸಂಬಂಧಕ್ಕೆ ಮಸಿ ಬಳೆದಿದ್ದಾನೆ. ಲಾಡ್ಜ್ ಒಂದರಲ್ಲಿ ತನ್ನ ಸೊಸೆಯ ಮೇಲೆಯೇ ಅತ್ಯಚಾರವೆಸಗಿದ್ದಾನೆ ಈ ಕಾಮುಕ. ಹೈದರಾಬಾದ್ ಹಬೀಬ್ ನಗರದಲ್ಲಿನ ಲಾಡ್ಜ್ ಒಂದರಲ್ಲಿ 21 ವರ್ಷದ ಮಹಿಳೆಯ ಮೇಲೆ ಮಾವ ಅತ್ಯಚಾರ ನಡೆಸಿದ್ದಾಗಿ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಮಹಿಳೆ ಮೇಲೆ ಅತ್ಯಚಾರವೆಸಗಿ ಬೆಂಕಿ ಹಚ್ಚಿ ಪರಾರಿಯಾದ ತಂದೆ – ಮಗ
ದೆಹಲಿಯಲ್ಲಿ ಆರೋಪಿ ಬಟ್ಟೆ ವ್ಯಾಪಾರಿಯಾಗಿದ್ದ. ಆತನ ಜೊತೆಗೆ ಬಟ್ಟೆ ಖರೀದಿಗಾಗಿ ಹೈದರಾಬಾದಿಗೆ ಸಂತ್ರಸ್ತ ಮಹಿಳೆ ಬಂದಿದ್ದಳು. ಈ ವೇಳೆ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದಾಗ ಸೊಸೆ ಮೇಲೆ ಕಾಮ ಪಿಶಾಚಿಯಂತೆ ಎರಗಿದ್ದ ಮಾವ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸದ್ಯ ಈ ಬಗ್ಗೆ ಮಹಿಳೆ ಹಬೀಬ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆಯ ಮಾವನನ್ನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.