T20 world cup 2022 | ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳು ಯಾವುವು ?
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ 2022 ಅಕ್ಟೋಬರ್ 15 ರಿಂದ ಆರಂಭವಾಗಲಿದೆ. ಮೊದಲು ರೌಂಡ್ 1 ಮ್ಯಾಚ್ ಗಳು ನಡೆಯಲಿವೆ.
ಅಕ್ಟೋಬರ್ 22 ರಿಂದ ಸೂಪರ್ 12 ಮ್ಯಾಚ್ ಗಳು ಜರುಗಲಿವೆ. ಈ ಮೆಗಾ ಟೂರ್ನಿಗಾಗಿ ಈಗಾಗಲೇ ಎಲ್ಲಾ ತಂಡಗಳು ಸನ್ನದ್ಧವಾಗಿವೆ.
ಈ ನಡುವೆ ಈ ಬಾರಿ ಯಾವ ತಂಡ ವಿಶ್ವಕಪ್ ಅನ್ನು ಗೆಲ್ಲುತ್ತೆ ಅಂತಾ ಎಲ್ಲರೂ ಅಂದಾಜಿಸುತ್ತಿದ್ದಾರೆ. ಸಾಕಷ್ಟು ಕ್ರಿಕೆಟಿಗರು ತಮ್ಮದೇಯಾದ ತಂಡದ ಹೆಸರನ್ನು ಹೇಳುತ್ತಿದ್ದಾರೆ.
ಅದರಂತೆ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಮೈಖಲ್ ಬೆವನ್ ಈ ಬಾರಿ ವಿಶ್ವಕಪ್ ಗೆಲ್ಲಲು ಅವಕಾಶವಿರುವ ಮೂರು ತಂಡಗಳ ಹೆಸರನ್ನು ತಿಳಿಸಿದ್ದಾರೆ.
ಅವರ ಪ್ರಕಾರ ಆಸ್ಟ್ರೇಲಿಯಾ, ಟೀಂ ಇಂಡಿಯಾ, ಇಂಗ್ಲೆಂಡ್ ತಂಡಗಳು ಈ ಬಾರಿ ವಿಶ್ವಕಪ್ ಗೆಲ್ಲುವ ಫೇವರೇಟ್ ಗಳಾಗಿವೆ.

ಬೆವನ್ ಪ್ರಕಾರ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ಗಳು ಫೈನಲ್ ಗೆ ಎಂಟ್ರಿ ಕೊಡುವ ಸಾಧ್ಯತೆಗಳು ಇವೆಯಂತೆ.
ಟಿ 20 ವಿಶ್ವಕಪ್ 2022 ಟೈಟಲ್ ರೇಸ್ ನಲ್ಲಿ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ನಿಲ್ಲಲಿವೆ ಎಂದು ನಾನು ಭಾವಿಸುತ್ತೇನೆ.
ಪ್ರಸ್ತುತ ಫಾರ್ಮ್ ನೋಡಿದ್ರೆ ಟೀಂ ಇಂಡಿಯಾ, ಇಂಗ್ಲೆಂಡ್ ತಂಡಗಳಿಗೆ ಹೆಚ್ಚು ಅವಕಾಶಗಳಿವೆ ಎಂದಿದ್ದಾರೆ.
ಇನ್ನು ಆಸ್ಟ್ರೇಲಿಯಾ ತಂಡ ಕೂಡ ಕಪ್ ಗೆಲ್ಲುವ ಸಾಧ್ಯತೆಗಳಿವೆ. ಆಸೀಸ್ ತಂಡದಲ್ಲಿ ಅದ್ಭುತ ಪ್ಲೇಯರ್ಸ್ ಇದ್ದಾರೆ.
ಅವರು ತಮ್ಮ ಫಾರ್ಮ್ ಅನ್ನು ಮುಂದುವರೆಸಿದ್ರೆ, ಆಸ್ಟ್ರೇಲಿಯಾ ಕೂಡ ಕಪ್ ಗೆಲ್ಲುವ ಅವಕಾಶಗಳಿವೆ.
ಅದರಲ್ಲೂ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಗೆಲ್ಲುತ್ತಿರುವುದರಿಂದ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ ಎಂದಿದ್ದಾರೆ.