ಹುಬ್ಬಳ್ಳಿ: ಆರೋಪಿ ಫಯಾಜ್ (Fayaz) ನನ್ನ ಮಗಳನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದ ಎಂದು ಕೊಲೆಯಾದ ನೇಹಾ ಹಿರೇಮಠ ತಂದೆ ನಿರಂಜನ್ ಆರೋಪಿಸಿದ್ದಾರೆ.
ಸಿಐಡಿ ಅಧಿಕಾರಿಗಳು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಐಡಿ ಅಧಿಕಾರಿಗಳ ಮುಂದೆ ಎಲ್ಲ ವಿಷಯ ಹೇಳಿದ್ದೇನೆ. ಆದರೆ, ಕೆಲವು ವಿಷಯ ಬಹಿರಂಗ ಮಾಡಲು ಆಗುವುದಿಲ್ಲ. ಆರೋಪಿ ನನ್ನ ಮಗಳನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದ. ಕೆಲ ದಿನಗಳಿಂದ ಬೆದರಿಕೆ ಇತ್ತು ಎಂದು ಹೇಳಿದ್ದಾರೆ.
ಯಾರ್ಯಾರೋ ಬಂದು ವೀಡಿಯೋ ಮಾಡುತ್ತಿದ್ದಾರೆ. ನನ್ನ ಪತ್ನಿ ಇರುವ ಕೋಣೆಗೆ ಬಂದು ವಿಡಿಯೋ ಮಾಡಿದ್ದಾರೆ. ನನಗೆ ಗೊತ್ತಾದ ನಂತರ ವಿಡಿಯೋ ಡಿಲಿಟ್ ಮಾಡಿಸಿದ್ದೇನೆ ಎಂದು ಹೇಳಿದ್ದಾರೆ. ಹಲವು ದಿನಗಳಿಂದ ಅನಾಮಿಕ ವ್ಯಕ್ತಿಗಳು ಕೂಡ ಓಡಾಡುತ್ತಿದ್ದಾರೆ. ನನ್ನ ಪ್ರಾಣ ಹೋದರೂ ಪರವಾಗಿಲ್ಲ. ಅವನ ಪ್ರಾಣ ತಗೋತೀನಿ ಎಂದು ನನ್ನ ಮಗಳ ಶವದ ಮೇಲೆ ಶಪಥ ಮಾಡಿದ್ದೇನೆ ಎಂದು ಆಗ್ರಹಿಸಿದ್ದಾರೆ.