ಎಫ್ ಡಿಎ ಪರೀಕ್ಷಾ ದಿನಾಂಕ ಪ್ರಕಟ : ಫೆ. 28ಕ್ಕೆ ಪರೀಕ್ಷೆ
ಬೆಂಗಳೂರು : ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆ ಮುಂದೂಡಲಾಗಿದ್ದ ಎಫ್ ಡಿಎ ಪರೀಕ್ಷೆಯನ್ನ ಫೆಬ್ರವರಿ 28 ರಂದು ನಡೆಸುವುದಾಗಿ ಆಯೋಗ ತಿಳಿಸಿದೆ.
ಈ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗ ಕಾರ್ಯದರ್ಶಿ ಜಿ ಸತ್ಯವತಿ ಅವರು ಪ್ರಕಟನೆ ಹೊರಡಿಸಿದ್ದಾರೆ.
ದಿನಾಂಕ 31.01.2020ರ ಅಧಿಸೂಚನೆಗಳಲ್ಲಿ ಅಧಿಸೂಜಿಸಲಾಗಿದ್ದ ಸಹಾಯಕ/ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 24.01.2021ರಂದು ನಡೆಯಬೇಕಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
ಪ್ರಸ್ತುತ ಮುಂದೂಡಲಾದ ಮೇಲ್ಕಂಡ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ದಿನಾಂಕ 28.02.2021 ರಂದು ಭಾನುವಾರ ನಡೆಯಲು ಆಯೋಗವು ತೀರ್ಮಾನಿಸಿದೆ.
ಈ ಪರೀಕ್ಷೆ ಕಳೆದ ತಿಂಗಳು 24 ರಂದು ನಡೆಯಬೇಕಿತ್ತು. ಆದ್ರೆ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಪರೀಕ್ಷೆಯನ್ನು ಮುಂದೂಡಲಾಗಿತ್ತು.
ಇದೀಗ ಪರೀಕ್ಷೆಯ ದಿನಾಂಕ ಪ್ರಕಟವಾಗಿದ್ದು, ಫೆಬ್ರವರಿ 28 ಎಂದು ಭಾನುವಾರ ನಡೆಯಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel