ಜೈಲಿನಲ್ಲಿ ಮಹಿಳಾ ಕೈದಿಗಳು ಗರ್ಭಿಣಿಯಾಗುತ್ತಿರುವುದಕ್ಕೆ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಪಶ್ಚಿಮ ಬಂಗಾಳ(West Bengal)ದ ಬೇರೆ ಬೇರೆ ಜೈಲು (Jail)ಗಳ ಕುರಿತು ಕೋಲ್ಕತ್ತಾ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸುತ್ತಿದೆ. ಕಸ್ಟಡಿಯಲ್ಲಿದ್ದ ಮಹಿಳಾ ಕೈದಿಗಳು ಗರ್ಭಿಣಿಯಾಗುವ ಆತಂಕಕಾರಿ ವಿಷಯ ಬಹಿರಂಗವಾಗಿದ್ದು, ರಾಜ್ಯಾದ್ಯಂತ ವಿವಿಧ ಸುಧಾರಣಾ ಕೇಂದ್ರಗಳಲ್ಲಿ ಅಂದಾಜು 196 ಶಿಶುಗಳು ಜನಿಸಿರುವುದಾಗಿ ತಿಳಿದು ಬಂದಿದೆ. ಜೈಲುಗಳಲ್ಲಿ ಜನದಟ್ಟಣೆಯ ಕುರಿತು 2018ರಲ್ಲಿ ಹೈಕೋರ್ಟ್ನಿಂದ ಭಂಜಾ ಅಮಿಕಸ್ ಕ್ಯೂರಿಯಾಗಿ ನೇಮಿಸಲಾಗಿತ್ತು.
ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡ ವಕೀಲ ತಪಸ್ ಕುಮಾರ್ ಭಂಜಾ ಅವರು ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಸುಪ್ರತಿಮ್ ಭಟ್ಟಾಚಾರ್ಯ ಅವರನ್ನೊಳಗೊಂಡ ಪೀಠಕ್ಕೆ ಈ ವಿಷಯ ಹೇಳಿದರು. ಮಹಿಳಾ ಕೈದಿಗಳಿರುವ ಆವರಣಕ್ಕೆ ಪುರುಷ ಕೈದಿಗಳು ಪ್ರವೇಶಿಸುವುದನ್ನು ನಿರ್ಬಂಧಿಸಬೇಕು ಎಂದು ಅಮಿಕಸ್ ಸಲಹೆ ನೀಡಿದೆ.