ಯಾದಗಿರಿ: ಮಹಾಮಾರಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ರಾಜ್ಯ ಇಂದು ಮಾಸ್ಕ್ ಡೇ ನಡೆಸುತ್ತಿದ್ದು, ರಸ್ತೆಯಲ್ಲಿ ಮಾಸ್ಕ್ ಹಾಕದೆ ತಿರುಗುತ್ತಿದ್ದವರು ಮತ್ತು ಅಂಗಡಿಗಳ ವ್ಯಾಪಾರಿಗಳಿಗೆ ಯಾದಗಿರಿ ಜಿಲ್ಲಾಧಿಕಾರಿ ಕೂರ್ಮರಾವ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಯಾದಗಿರಿ ನಗರದ ವಿವಿಧ ಕಡೆ ಡಿಸಿ ಕೂರ್ಮರಾವ್ ಪಾದಯಾತ್ರೆ ಮೂಲಕ ತೆರಳಿ ಮಾಸ್ಕ್ ಹಾಕಿಕೊಳ್ಳುವಂತೆ ಜಾಗೃತಿ ಮೂಡಿಸಿದರು. ಆಟೋ ಚಾಲಕರ ಬಳಿ ತೆರಳಿದ ಡಿಸಿ ನಂತರ, ಹೇರ್ ಕಟಿಂಗ್ ಶಾಪ್‍ಗಳಿಗೂ ತೆರಳಿ ಕೊರೊನಾ ಜಾಗೃತಿ ಮೂಡಿಸಿದರು. ಜಿಲ್ಲಾಧಿಕಾರಿ ನಡೆಸಿದ ಮಾಸ್ಕ್ ಜಾಗೃತಿ ಜಾಥಾಕ್ಕೆ ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರು ಸಾಥ್ ನೀಡಿದರು.








