FIFA World Cup: ಫಿಫಾ ವಿಶ್ವಕಪ್ ಫೈನಲ್ ಪ್ರವೇಶಿಸಿದ ಅರ್ಜೆಂಟೀನಾ
ಕ್ರೊವೇಷಿಯಾ ವಿರುದ್ಧ ಗೆದ್ದು ಫಿಫಾ ವಿಶ್ವಕಪ್ನ ಮೊದಲ ತಂಡವಾಗಿ ಅರ್ಜೆಂಟೀನಾ ಫೈನಲ್ ಪ್ರವೇಶಿಸಿದೆ.
ಸೌದಿ ಅರೇಬಿಯಾ ವಿರುದ್ಧದ ಮೊದಲ ಸೋಲು ಅರ್ಜೆಂಟೀನಾ ತಂಡದ ತಂತ್ರಗಳನ್ನೇ ಬದಲಿಸಲು ಕಾರಣವಾಯಿತು. ವಿಶ್ವಕಪ್ ಗೆಲ್ಲಲೇಬೇಕೆಂಬ ಛಲದಿಂದ ಹಠಕ್ಕೆ ಬಿದ್ದಂತೆ ಹೋರಾಡಿದರ ಪರಿಣಾಮ ಅರ್ಜೆಂಟೀನಾ ವಿಶ್ವಕಪ್ನ ಮೊದಲ ತಂಡವಾಗಿ ಪೈನಲ್ ಪ್ರವೇಶಿಸಿದೆ.
ಕ್ರೊವೇಷಿಯಾ ಎದುರು ಮಧ್ಯರಾತ್ರಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ 3-0 ಗೋಲುಗಳಿಂದ ಗೆದ್ದು 6ನೇ ಬಾರಿ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ.
ನೆನ್ನೆ ಮಧ್ಯರಾತ್ರಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ಪರ ಮೆಸ್ಸಿ ಒಂದು ಗೋಲ್ ಬಾರಿಸಿದರೆ, ಜೂಲಿಯನ್ ಅಲ್ವಾರೆಜ್ ಬ್ರೇಸ್ ಬಾರಿಸಿದ ಎರಡು ಗೋಲುಗಳು ಕ್ರೊವೇಷಿಯಾದ ಫೈನಲ್ ಹಾದಿಯನ್ನು ಮುಚ್ಚಿ ಹಾಕಿತು.
2018 ರ ರನ್ನರ್ ಅಪ್ ಕ್ರೊವೇಷಿಯಾ, 2014ರ ವಿಶ್ವಕಪ್ ನ ರನ್ನರ್ ಅಪ್ ಅರ್ಜೆಂಟೀನಾ ವಿರುದ್ಧ ಈ ಬಾರಿ ಸೆಮಿಫೈನಲ್ ನಲ್ಲಿ ಮುಗ್ಗರಿಸಿದೆ.
ಇನ್ನೊಂದು ಸೆಮಿ ಫೈನಲ್ ನಲ್ಲಿ ಇಂದು ಫ್ರಾನ್ಸ್, ಮೊರಾಕೋವನ್ನು ಎದುರಿಸಲಿದೆ. ಫ್ರಾನ್ಸ್ ಕಳೆದ ಬಾರಿಯ ಚಾಂಪಿಯನ್ ಆಗಿದ್ದರೆ, ಮೊರಾಕೋ ಮೊದಲ ಬಾರಿ ಆಫ್ರಿಕಾ ಖಂಡದಿಂದ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ.
FIFA World Cup: Argentina enter FIFA finals








