ADVERTISEMENT
Wednesday, July 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ವಿಶ್ವಕಪ್ ಗೆದ್ದು ಇತಿಹಾಸ ಬರೆದ ಭಾರತದ ಯುವ ಪಡೆ; ವೈಭವ್ ಸೂರ್ಯವಂಶಿ ಅಬ್ಬರದ 175 ರನ್, ಇಂಗ್ಲೆಂಡ್ ವಿರುದ್ಧ 100 ರನ್ಗಳ ಭರ್ಜರಿ ಜಯ!

India's young team creates history by winning the World Cup; Vaibhav Suryavanshi scores a blistering 175 runs, leads to a 100-run win over England!

Shwetha by Shwetha
February 7, 2026
in ಕ್ರಿಕೆಟ್, National, Newsbeat, ಕ್ರೀಡೆ, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಹರಾರೆ: ಬ್ಯಾಟಿಂಗ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ರುದ್ರತಾಂಡವ ಹಾಗೂ ಬೌಲಿಂಗ್‌ನಲ್ಲಿ ಆರ್ ಎಸ್ ಅಂಬರೀಶ್ ಅವರ ಚಾಕಚಕ್ಯತೆಯಿಂದಾಗಿ, ಇಂಗ್ಲೆಂಡ್ ವಿರುದ್ಧ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಭಾರತದ ಅಂಡರ್ 19 ತಂಡವು ಐತಿಹಾಸಿಕ ಜಯ ದಾಖಲಿಸಿದೆ. ಈ ಮೂಲಕ ಟೀಮ್ ಇಂಡಿಯಾ ಆರನೇ ಬಾರಿಗೆ ಅಂಡರ್ 19 ವಿಶ್ವಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡು ದಾಖಲೆ ಬರೆದಿದೆ.

ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟಾಸ್ ಗೆದ್ದ ಭಾರತದ ಕಿರಿಯರ ತಂಡದ ನಾಯಕ ಆಯುಷ್ ಮ್ಹಾತ್ರೆ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಘಾತದ ನಡುವೆಯೂ ಕ್ರೀಸ್ ಕಚ್ಚಿ ನಿಂತ ಭಾರತೀಯ ಬ್ಯಾಟರ್‌ಗಳು ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.

Related posts

bhagavad-gita-life-lessons-kannada-motivation

Astro- ಜೀವನದಲ್ಲಿ ಭರವಸೆಯ ನಂಬಿಕೆ ಕಳೆದುಕೊಂಡಾಗ ಧೈರ್ಯ ತುಂಬುವ ಭಗವದ್ಗೀತೆಯ 5 ಅಮೂಲ್ಯ ಮಾತುಗಳು..!

July 29, 2026
sathyanarayana-para-athletics-coach-success-story

ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ ” ಸತ್ಯ ” ಸಾಧನೆಯ ಯಶೋಗಾಥೆ..!

July 29, 2026

ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್

ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದು ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರದ ಬ್ಯಾಟಿಂಗ್. ಕ್ರೀಸ್‌ಗೆ ಇಳಿದ ಕ್ಷಣದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಸೂರ್ಯವಂಶಿ, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಕೇವಲ 55 ಎಸೆತಗಳಲ್ಲಿ ಶತಕ ಪೂರೈಸಿದ ಅವರು 2ನೇ ಅತೀ ವೇಗದ ಶತಕದ ದಾಖಲೆ ಬರೆದರು.

ಶತಕದ ಬಳಿಕವೂ ತಮ್ಮ ಅಬ್ಬರ ನಿಲ್ಲಿಸದ ವೈಭವ್, ಕೇವಲ 80 ಎಸೆತಗಳಲ್ಲಿ ಬರೋಬ್ಬರಿ 15 ಬೌಂಡರಿ ಹಾಗೂ 15 ಮುಗಿಲೆತ್ತರದ ಸಿಕ್ಸರ್ಗಳ ನೆರವಿನಿಂದ 175 ರನ್ ಸಿಡಿಸಿ ಔಟಾದರು. ಇದು ಅಂಡರ್ 19 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಬ್ಯಾಟರ್ ಒಬ್ಬರು ಗಳಿಸಿದ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ.

ನಾಯಕ ಆಯುಷ್ ಮ್ಹಾತ್ರೆ, ವೇದಾಂತ್ ತ್ರಿವೇದಿ (32), ವಿಹಾನ್ (30), ಕುಂದು (40) ಹಾಗೂ ಕನಿಷ್ಕಾ ಚೌಹಾಣ್ (37) ಅವರ ಸಮಯೋಚಿತ ಆಟದ ನೆರವಿನಿಂದ ಭಾರತ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 412 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು.

ಹೋರಾಡಿ ಸೋತ ಇಂಗ್ಲೆಂಡ್

412 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಬೆನ್ ಡಾಕಿನ್ಸ್ (66) ಮತ್ತು ಬೆನ್ ಮೇಯಸ್ (45) ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಕ್ಯಾಲೆಭ್ ಫಾಲ್ಕನರ್ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. 67 ಎಸೆತಗಳಲ್ಲಿ 9 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಮೂಲಕ 115 ರನ್ ಬಾರಿಸಿ ಶತಕದ ಸಂಭ್ರಮ ಆಚರಿಸಿದರು.

ಅಂಬರೀಶ್ ಚುರುಕಿನ ಬೌಲಿಂಗ್ ದಾಳಿ

ಆದರೆ, ಭಾರತದ ವೇಗಿ ಆರ್ ಎಸ್ ಅಂಬರೀಶ್ ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಯ ಮುಂದೆ ಇಂಗ್ಲೆಂಡ್ ಬ್ಯಾಟರ್‌ಗಳು ಮಂಕಾದರು. ಅಂಬರೀಶ್ ಪ್ರಮುಖ 3 ವಿಕೆಟ್ ಕಬಳಿಸಿ ಎದುರಾಳಿಗಳ ರನ್ ವೇಗಕ್ಕೆ ಲಗಾಮು ಹಾಕಿದರು. ಫಾಲ್ಕನರ್ ಔಟಾಗುತ್ತಿದ್ದಂತೆಯೇ ಕುಸಿತ ಕಂಡ ಇಂಗ್ಲೆಂಡ್ ತಂಡ, ಇನ್ನೂ 10 ಓವರ್‌ಗಳು ಬಾಕಿ ಇರುವಂತೆಯೇ 311 ರನ್‌ಗಳಿಗೆ ಆಲೌಟ್ ಆಯಿತು.

ಅಂತಿಮವಾಗಿ ಭಾರತದ ಯುವ ಪಡೆ 100 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿ, ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂಭ್ರಮದ ಉಡುಗೊರೆ ನೀಡಿತು.

ShareTweetSendShare
Join us on:

Related Posts

bhagavad-gita-life-lessons-kannada-motivation

Astro- ಜೀವನದಲ್ಲಿ ಭರವಸೆಯ ನಂಬಿಕೆ ಕಳೆದುಕೊಂಡಾಗ ಧೈರ್ಯ ತುಂಬುವ ಭಗವದ್ಗೀತೆಯ 5 ಅಮೂಲ್ಯ ಮಾತುಗಳು..!

by admin
July 29, 2026
0

ಪ್ರತಿಯೊಬ್ಬರ ನಿಜ ಜೀವನದ ಬದುಕಿನಲ್ಲೂ ಎಲ್ಲವನ್ನೂ ಕಳೆದುಕೊಂಡಂತೆ ಭಾಸವಾಗುವ ಒಂದು ಕ್ಷಣ ಬಂದೇ ಬರುತ್ತದೆ. ದುಃಖಗಳು ಅಂತ್ಯವಿಲ್ಲದಂತೆ ಕಾಣುತ್ತವೆ ಮತ್ತು ತೊಂದರೆಗಳು ಒಂದರ ನಂತರ ಒಂದರಂತೆ ಬರುತ್ತಲೇ...

sathyanarayana-para-athletics-coach-success-story

ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ ” ಸತ್ಯ ” ಸಾಧನೆಯ ಯಶೋಗಾಥೆ..!

by admin
July 29, 2026
0

ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ " ಸತ್ಯ " ಸಾಧನೆಯ ಯಶೋಗಾಥೆ..! ಸರಿ...

saransh-jain-test-call-up-india-srilanka-2026

Teamindia- ತಂದೆಯ ಕನಸನ್ನು ನನಸು ಮಾಡಿರುವ 33ರ ಹರೆಯದ ಸರನ್ಶ್..!

by admin
July 29, 2026
0

"ನೀನು ಇನ್ನೂ ಚೆನ್ನಾಗಿ ಆಡಿದ್ರೆ ನಾನು ಬೇಗ ಗುಣಮುಖನಾಗುತ್ತೇನೆ". ಇದು ಕ್ಯಾನ್ಸರ್‍ನಿಂದ ಬಳಲುತ್ತಿದ್ದ ತಂದೆ ತನ್ನ ಮಗನಿಗೆ ಬರೆದಿರುವ ಕೈಪಿಡಿಯ ಬರಹ. ತಂದೆಯ ಆಸೆಯಂತೆ ಮಗ ಇಂದು...

2ನೇ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಇರಬಹುದು: ಜಮೀರ್ ಖಾನ್

2ನೇ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಇರಬಹುದು: ಜಮೀರ್ ಖಾನ್

by Shwetha
July 29, 2026
0

ಮಾಜಿ ಸಚಿವ ಜಮೀರ್ ಖಾನ್ ಅವರು, ಸಚಿವ ಸಂಪುಟ ವಿಸ್ತರಣೆಯ ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು ಇರಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ...

ಇದು ನೇರ ಚಾರಿತ್ರ್ಯ ವಧೆ: ಪ್ರಲ್ಹಾದ್ ಜೋಶಿ ವಿರುದ್ಧ ಸುಳ್ಳು ಹೇಳಿಕೆ ನೀಡಿದ ಪ್ರಿಯಾಂಕಾ ಗಾಂಧಿ- ಕ್ಷಮೆಯಾಚನೆಗೆ ಪಟ್ಟು ಹಿಡಿದ ಪ್ರಲ್ಹಾದ್ ಜೋಶಿ

ಇದು ನೇರ ಚಾರಿತ್ರ್ಯ ವಧೆ: ಪ್ರಲ್ಹಾದ್ ಜೋಶಿ ವಿರುದ್ಧ ಸುಳ್ಳು ಹೇಳಿಕೆ ನೀಡಿದ ಪ್ರಿಯಾಂಕಾ ಗಾಂಧಿ- ಕ್ಷಮೆಯಾಚನೆಗೆ ಪಟ್ಟು ಹಿಡಿದ ಪ್ರಲ್ಹಾದ್ ಜೋಶಿ

by Shwetha
July 29, 2026
0

ನವದೆಹಲಿ: ಲೋಕಸಭಾ ಅಧಿವೇಶನದಲ್ಲಿ ನಿನ್ನೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರ ನಡೆದಿದೆ. ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕಾಂಗ್ರೆಸ್ ಸಂಸದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram