FIFA World Cup: ಫಿಫಾ ವಿಶ್ವಕಪ್ – ರೊನಾಲ್ಡೊ ವರ್ಲ್ಡ್ ರೆಕಾರ್ಡ್ !!
ಕ್ರಿಸ್ಟಿಯಾನೋ ರೊನಾಲ್ಡೊ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದಾರೆ . ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಘಾನಾ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ಪುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಪೆನಾಲ್ಟಿ ಗೋಲು ಗಳಿಸಿದರು.ಆ ಮೂಲಕ ಅವರೀಗ ಐದು ಫಿಫಾ ವಿಶ್ವಕಪ್‌ಗಳಲ್ಲಿ ಸ್ಕೋರ್ ಮಾಡಿದ ಮೊದಲ ಫುಟ್‌ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
37 ವರ್ಷ ವಯಸ್ಸಿನ ರೋನಾಲ್ಡೋ, ಘಾನಾ ವಿರುದ್ಧದ ಪಂದ್ಯದಲ್ಲಿ 65 ನೇ ನಿಮಿಷದಲ್ಲಿ ಪೆನಾಲ್ಟಿ ಗೆದ್ದ ನಂತರ ತಮ್ಮ 8 ನೇ FIFA ವಿಶ್ವಕಪ್ ಗೋಲು ಗಳಿಸಿದರು. ಕ್ರಿಸ್ಟಿಯಾನೋ ರೊನಾಲ್ಡೊ ಈ ಮೊದಲು 2006, 2010, 2014, 2018ರ ಫಿಫಾ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ್ದರು.
ಪೋರ್ಚುಗಲ್ ಘಾನಾ ವಿರುದ್ಧದ ಪಂದ್ಯದಲ್ಲಿ 3-2 ಗೋಲುಗಳಿಂದ ವಿಜಯ ಸಾಧಿಸಿದೆ.
FIFA World Cup: FIFA World Cup – Ronaldo World Record !!