FIFA World Cup : ಇಂದು ಫ್ರಾನ್ಸ್ ಅರ್ಜೆಂಟೀನಾ ನಡುವೆ ಗ್ರ್ಯಾಂಡ್ ಫಿನಾಲೆ….
ಕತಾರ್ ನಲ್ಲಿ ನಡೆಯುತ್ತಿರು ಫಿಫಾ ವಿಶ್ವಕಪ್ ಫೈನಲ್ ಪಂದ್ಯ ಇಂದು ನಡೆಯಲಿದೆ. ಹಾಲಿ ಚಾಂಪಿಯನ್ ಫ್ರಾನ್ಸ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡಗಳು ಸೆಣಸಲಿವೆ.
ಎರಡೂ ತಂಡಗಳು ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ ಟೋಫ್ರಿಗೆ ಮುತ್ತಿಕ್ಕಿವೆ. ಅರ್ಜೆಂಟೀನಾ 36 ವರ್ಷಗಳಿಂದ ಟ್ರೋಫಿಗಾಗಿ ಕಾಯುತ್ತಿದೆ. 1986ರಲ್ಲಿ ಡಿಯಾಗೋ ಮರಡೋನಾ ನಾಯಕತ್ವದಲ್ಲಿ ತಂಡ ಕೊನೆಯ ಬಾರಿ ವಿಶ್ವಕಪ್ ಗೆದ್ದಿತ್ತು. ಅಂದಿನಿಂದ ಅರ್ಜೆಂಟೀನಾ ಈ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿರಲಿಲ್ಲ. ಮತ್ತೊಂದೆಡೆ, ಫ್ರಾನ್ಸ್ 1998 ಮತ್ತು 2018 ರಲ್ಲಿ ವಿಶ್ವಕಪ್ ಗೆದ್ದುಕೊಂಡಿತು. ಫ್ರಾನ್ಸ್ ಗೆ ಸತತ ಎರಡನೇ ಬಾರಿ ವಿಶ್ವಕಪ್ ಗೆಲ್ಲುವ ಅವಕಾಶ ಸಿಕ್ಕಿದೆ.
ಎರಡು ತಂಡಗಳ ನಡುವೆ ಮುಖಾಮುಖಿ
2018ರ ವಿಶ್ವಕಪ್‌ನ 16ನೇ ಸುತ್ತಿನ ನಾಕೌಟ್ ಪಂದ್ಯದಲ್ಲಿ ಫ್ರಾನ್ಸ್ ಮತ್ತು ಅರ್ಜೆಂಟೀನಾ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಇವರಿಬ್ಬರ ನಡುವೆ ರೋಚಕ ಪಂದ್ಯ ನಡೆಯಿತು. ಪಂದ್ಯವನ್ನು ಫ್ರಾನ್ಸ್ 4–3ರಿಂದ ಗೆದ್ದುಕೊಂಡಿತು. ಈ ಕಾರಣಕ್ಕಾಗಿ ಅರ್ಜೆಂಟೀನಾ ವಿಶ್ವಕಪ್‌ನಿಂದ ಹೊರಗುಳಿದಿತ್ತು. ಈ ಬಾರಿ ಅರ್ಜೆಂಟೀನಾ ತನ್ನ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಬಯಸಿದೆ.
ಸತತ ಎರಡನೇ ಬಾರಿಗೆ ಫೈನಲ್ ತಲುಪಿದ ಹಾಲಿ ಚಾಂಪಿಯನ್ ಫ್ರಾನ್ಸ್…
ಕಳೆದ ವಿಶ್ವಕಪ್‌ನಂತೆ ಈ ಬಾರಿಯೂ ಫ್ರಾನ್ಸ್ ಫೈನಲ್ ತಲುಪಿದೆ. 2018 ರಲ್ಲಿ, ಅವರು ಮೊಡ್ರಿಕ್ ಅವರ ತಂಡ ಕ್ರೊಯೇಷಿಯಾವನ್ನ ಎದುರಿಸಿತ್ತು. ಈ ಬಾರಿ ಅವರು ಫ್ರಾನ್ಸ್ ಮೆಸ್ಸಿ ತಂಡ ಅರ್ಜೆಂಟೀನಾ ವಿರುದ್ಧ ಸೆಣಸಲಿದೆ.
ಈ ವಿಶ್ವಕಪ್‌ಗೂ ಮುನ್ನ ಫ್ರಾನ್ಸ್‌ನ ದೊಡ್ಡ ಆಟಗಾರರಾದ ಬೆಂಜೆಮಾ, ಪೊಗ್ಬಾ, ಕಾಂಟೆ ಮತ್ತು ಅಂಕುಕು ಗಾಯಗೊಂಡಿದ್ದರು. ಇದರ ಹೊರತಾಗಿಯೂ, ತಂಡದ ಮ್ಯಾನೇಜರ್ ಡಿಡಿಯರ್ ಡೆಶಾಂಪ್ಸ್ ಸಮತೋಲಿತ ತಂಡವನ್ನು ನಿರ್ಮಿಸಿದರು ಮತ್ತು ಸತತ ಎರಡನೇ ಬಾರಿಗೆ ವಿಶ್ವಕಪ್‌ನ ಫೈನಲ್‌ಗೆ ಕೊಂಡೊಯ್ದರು.
FIFA World Cup: Grand Finale between France and Argentina today….