FIFA World Cup Semi-Final: ಬೆಂಗಳೂರು ಬಾರ್ & ಪಬ್ ಗಳ ಅವಧಿ ವಿಸ್ತರಣೆ…
ಫಿಫಾ ವಿಶ್ವಕಪ್ ಸೆಮಿಪೈನಲ್ ಮತ್ತು ಫೈನಲ್ ಮ್ಯಾಚ್ ಗಳ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಬಾರ್ & ರೆಸ್ಟೋರೆಂಟ್, ಪಬ್ ಗಳ ಅವಧಿ ವಿಸ್ತರಣೆ ಮಾಡಲು ಬೆಂಗಳೂರು ಪೊಲೀಸರು ಅವಕಾಶ ನೀಡಿದ್ದಾರೆ.
ಡಿಸೆಂಬರ್ 14 ಹಾಗೂ 15 ರಂದು ಬೆಂಗಳೂರಿನಲ್ಲಿ ಬಾರ್ & ರೆಸ್ಟೋರೆಂಟ್, ಪಬ್ಗಳ ಅವಧಿ ವಿಸ್ತರಣೆ ಬೆಳಗಿನ ಜಾವ 3.30 ರ ತನಕ ತೆರೆಯಲು ಅವಧಿ ವಿಸ್ತರಿಸುವಂತೆ ಪೆಡರೇಷನ್ ಆಫ್ ಕ್ಲಬ್ಸ್ ಕರ್ನಾಟಕದಿಂದ ಮನವಿ ಮಾಡಿತ್ತು.
ಮನವಿ ಮೇರೆಗೆ ಎರೆಡು ದಿನ ಅವಧಿ ವಿಸ್ತರಣೆ ಮಾಡಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ.
ಇದುವರೆಗೆ ಮಧ್ಯರಾತ್ರಿ 1 ತನಕ ತೆರೆಯಲು ಮಾತ್ರ ಅವಕಾಶವಿತ್ತು. ಇದೀಗ ಫಿಫಾ ವಿಶ್ವಕಪ್ ಸೆಮಿಪೈನಲ್ ನಡೆಯುವ ಹಿನ್ನಲೆ ಎರೆಡು ದಿನ ಅವಧಿ ವಿಸ್ತರಣೆ ಮಾಡಲಾಗಿದೆ.
FIFA World Cup Semi-Final: Extension of Bars & Restaurants, Pubs in Bangalore








