Fifa Worldcup : ಇಂದು ಕ್ರೊವೇಷಿಯಾ, ಮೊರಾಕ್ಕೊ ಫೈಟ್..!!
ಫಿಫಾ ವಿಶ್ವಕಪ್ನಲ್ಲಿ (3ನೇ ಸ್ಥಾನ) ಇಂದು ಕ್ರೊವೇಷಿಯಾ ಮತ್ತು ಮೊರಾಕ್ಕೊ ತಂಡಗಳು ಕಾದಾಟ ನಡೆಸಲಿವೆ.
ಅಲ್ ರಯ್ಯಾನ್ನ ಖಲೀಫಾ ಮೈದಾನದಲ್ಲಿ ನಡೆಯಲಿರುವ ಪಂದ್ಯ ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಟೂರ್ನಿಗೆ ವಿದಾಯ ಹೇಳಲು ನಿರ್ಧಾರಿಸಿವೆ.
ಸೆಮಿಫೈನಲ್ನಲ್ಲಿ ಕ್ರೊವೇಷಿಯಾ ತಂಡ ಅರ್ಜೆಂಟಿನಾ ವಿರುದ್ಧ 0-3 ಗೋಲುಗಳಿಂದ ಸೋತಿತ್ತು. ಮೊರಾಕ್ಕೊ ತಂಡ ಹಾಲಿ ಚಾಂಪಿಯನ್ ಫ್ರಾನ್ಸ್ ವಿರುದ್ಧ 0-2 ಗೋಲುಗಳಿಂದ ಸೋತು ಟೂರ್ನಿಯಿಂದ ಹೊರ ಬಿದ್ದಿತ್ತು.
ಟೂರ್ನಿಯಲ್ಲಿ ಎರಡೂ ತಂಡಗಳು ಅಮೋಘ ಪ್ರದರ್ಶನ ನೀಡಿವೆ . ಆದರೆ ಸೆಮಿಫೈನಲ್ನಲ್ಲಿ ಎರಡೂ ತಂಡಗಳು ಗೋಲು ಹೊಡೆಯದೇ ನಿರಾಸೆ ಅನುಭವಿಸಿದವು.
ಕ್ರೊವೇಷಿಯಾ ತಂಡ ಕಳೆದ ಬಾರಿ ರನ್ನರ್ಅಪ್ ಆಗಿತ್ತು. ಆದರೆ ಈ ಬಾರಿ ಫೈನಲ್ ತಲುಪುವಲ್ಲಿ ಎಡವಿತು. ಇನ್ನು ಮೊರಾಕ್ಕೊ ತಂಡ ವಿಶ್ವಕಪ್ನಲ್ಲಿ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಆಫ್ರಿಕಾ ರಾಷ್ಟ್ರವೆಂಬ ಹಿರಿಮೆಗೆ ಪಾತ್ರವಾಯಿತು.
ವಿಶ್ವಕಪ್ನಲ್ಲಿ 3ನೇ ಸ್ಥಾನಕ್ಕಾಗಿ ಕ್ರೊವೇಷಿಯಾ ಎರಡನೆ ಬಾರಿ ಪೈಪೋಟಿ ನಡೆಸುತ್ತಿದೆ. 1998ರಲ್ಲಿ ನೆದರ್ಲೆಂಡ್ ವಿರುದ್ಧ ಕ್ರೊವೇಷಿಯಾ ಗೆದ್ದುಕೊಂಡಿತ್ತು. ಈ ಬಾರಿಯೂ ಗೆಲುವು ಸಾಸುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ಮೊರಾಕ್ಕೊ ಮತ್ತು ಕ್ರೊವೇಷಿಯಾ ಈ ವಿಶ್ವಕಪ್ನಲ್ಲಿ ಎರಡನೆ ಬಾರಿ ಮುಖಾಮುಖಿಯಾಗುತ್ತಿವೆ. ಗುಂಪಿನ ಗಂತದಲ್ಲಿ 0-0 ಗೋಲುಗಳಿಂದ ಡ್ರಾ ಮಾಡಿಕೊಂಡಿದ್ದವು.
ಟೂರ್ನಿಯಲ್ಲಿ ಅಚ್ಚರಿ ಫಲಿತಾಂಶಗಳನ್ನು ನೀಡಿದ ಕ್ರೊವೇಷಿಯಾ ಜಪಾನ್ ಮತ್ತು ಬಲಿಷ್ಠ ಬ್ರೆಜಿಲ್ ವಿರುದ್ಧ ಪೆನಾಲ್ಟಿ ಶೂಟೌಟ್ ಮೂಲಕವೇ ಗೆದ್ದು ಸೆಮಿಫೈನಲ್ ಪ್ರವೇಶಿಸಿತ್ತು.
ನಾವು ಈ ಟೂರ್ನಿಯಲ್ಲಿ ಸೆಮಿಫೈನಲ್ವರೆಗೆ ಮಾತ್ರ ತಲುಪುತ್ತೇವೆ ಎಂಬು ಖಾತ್ರಿಯಾಗಿತ್ತು. ನಂತರ ಸೆಮಿಫೈನಲ್ಗೆ ಬಂದಾಗ ಪ್ರಶಸ್ತಿ ಗೆಲ್ಲುವ ಕನಸು ಕಂಡೆವು ಎಂದು ಕ್ರೊವೇಷಿಯಾ ತಂಡ ಲೊವ್ರೊ ಮಾಜೆರ್ ಹೇಳಿದ್ದಾರೆ. ಶನಿವಾರದ ಪಂದ್ಯದಲ್ಲಿ ಕಂಚಿನ ಪದಕ ಗೆಲ್ಲುವುದಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ಕ್ರೊವೇಷಿಯಾ ತಂಡದ ತಾರಾ ಆಟಗಾರ ಇವಾನ್ ಪೆರಿಸಿಕ್ ಕಳೆದ 6 ವಿಶ್ವಕಪ್ ಗಳಿಂದ ತಂಡದ ಪರ 6 ಗೋಲು ಹೊಡೆದಿದ್ದಾರೆ ಇನ್ನು ಒಂದು ಗೋಲು ಹೊಡೆದರೆ ತಂಡದ ಮಾಜಿ ಆಟಗಾರ ಡಾವೊರ್ ಸಕ್ಕರ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಕ್ರೊವೇಷಿಯಾ ತಂಡದ ಕೆಲವು ತಾರಾ ಆಟಗಾರರು ಮುಂದಿನ ವಿಶ್ವಕಪ್ ನಲ್ಲಿ ಆಡುವುದಿಲ್ಲ.
ಇನ್ನು ಈ ಬಾರಿಯ ವಿಶ್ವಕಪ್ನಲ್ಲಿ ಉಪಾಂತ್ಯ ತಲುಪಿ ಇತಿಹಾಸ ಸೃಷ್ಟಿಸಿರುವ ಮೊರಾಕ್ಕೊ ಟ್ರೋಫಿ ಗೆಲ್ಲದಿದ್ದರೂ ತವರಿನಲ್ಲಿ ಅದ್ಧೂರಿ ಸ್ವಾಗತ ಪಡೆಯಲಿದೆ.








