ಬಿಜೆಪಿ ಜನವಿರೋಧಿ ನೀತಿಯ ವಿರುದ್ಧ ಹೋರಾಟ : ಶರತ್ ಬಚ್ಚೇಗೌಡ
ಬೆಂಗಳೂರು : ಬಿಜೆಪಿ ಜನ ವಿರೋಧಿ ನೀತಿ ವಿರುದ್ಧ ನನ್ನ ನಿಲುವಿದ್ದು, ಬಿಜೆಪಿ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡುತ್ತೇನೆ ಅಂತಾ ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶರತ್ ಬಚ್ಚೇಗೌಡ, ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಬಾಹ್ಯ ಬೆಂಬಲ ನೀಡಿದ್ದೇನೆ.
ಸಹ ಸದಸ್ಯತ್ವ ಪಡೆದಿಲ್ಲ. ಕಾಂಗ್ರೆಸ್ ಸಹ ನಮಗೆ ಬೆಂಬಲ ನೀಡಿದರೆ ಮತ್ತಷ್ಟು ಧ್ವನಿ ಜಾಸ್ತಿ ಮಾಡಬಹುದು ಅಂತಾ ತಿಳಿಸಿದರು.
ಇನ್ನು ಮುಂಬರುವ ದಿನಗಳಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕ್ಷೇತ್ರದ ಜನರ ಜತೆ ಚರ್ಚೆ ಮಾಡಿ ಮುಂದುವರೆಯುತ್ತೇನೆ.
ಪಂಚಾಯತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗಳು ಹೆಚ್ಚು ಜನ ಗೆದ್ದು ಬಂದು ಹೆಚ್ಚು ಪಂಚಾಯತ್ ನಲ್ಲಿ ಅಧಿಕಾರ ಹಿಡಿದಿದ್ದೇವೆ.
ಮುಂದಿನ ದಿನಗಳಲ್ಲಿ ನಾನು ಸ್ವಾತಂತ್ರ್ಯ ಅಭ್ಯರ್ಥಿಯಾಗಿರುತ್ತೇನೆ. ಕಾಂಗ್ರೆಸ್ ಪಕ್ಷದವರು ಕೂಡ ಬೆಂಬಲ ಸ್ವೀಕಾರ ಮಾಡಿದ್ದಾರೆ.
ಒಬ್ಬಂಟಿಯಾಗಿ ಹೋರಾಟ ಮಾಡುವ ಬದಲು ಪಕ್ಷದ ಬೆಂಬಲ ಪಡೆದಿದ್ದೇನೆ. ಕ್ಷೇತ್ರ ಅಭಿವೃದ್ಧಿಗಾಗಿ ಈ ನಿರ್ಧಾರ ಮಾಡಿದ್ದೇನೆ ಎಂದರು.
ಬಿಜೆಪಿ ಪರ – ವಿರೋಧ ಪ್ರಶ್ನೆ ಅಲ್ಲ. ನಾವು ಜನಪರ ಕೆಲಸ ಮಾಡಬೇಕು. ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ.
ಕೃಷಿ ಕಾಯಿದೆಗಳು ಸೇರಿ ಕೆಲ ನೀತಿಗಳ ಜಾರಿ ಮಾಡಲು ಬಿಜೆಪಿ ಮುಂದಾಗಿದೆ. ಇದನ್ನು ವಿರೋಧಿಸ ಬೇಕಾಗುತ್ತದೆ. ಅನ್ಯಾಯ ಎಂದು ಎನಿಸಿದ್ರೆ ಹೋರಾಟ ಮಾಡುತ್ತೇವೆ ಎಂದು ಶರತ್ ಬಚ್ಚೇಗೌಡ ತಿಳಿಸಿದರು.
