ಲಂಡನ್: ಬ್ರಿಟನ್ ನಲ್ಲಿ (Great Britain) ಸ್ಥಳೀಯರು, ಬಲಪಂಥೀಯರು ಹಾಗೂ ವಲಸಿಗ ಮುಸ್ಲಿಂರ (Migrant Muslims) ಮಧ್ಯೆ ಸಂಘರ್ಷ ನಡೆಯುತ್ತಿದ್ದು, ಅದು ಹಿಂಸಾಚಾರಕ್ಕೆ ತಿರುಗಿದೆ. ಹೀಗಾಗಿ ಯುಕೆ ಪೊಲೀಸರು (UK Police) ಸುಮಾರು 148 ಜನರನ್ನು ಬಂಧಿಸಿದ್ದಾರೆ.
4 ದಿನಗಳ ಹಿಂದೆಯಷ್ಟೇ ಆರಂಭವಾಗಿದ್ದ ಪ್ರತಿಭಟನೆ, ಹಿಂಸಾಚಾರ ರೂಪ ತಾಳಿದೆ. ಅಲ್ಲದೇ, ಈ ಹಿಂಸಾಚಾರ ಅಲ್ಲಿನ ಹಲವು ನಗರಗಳಿಗೂ ಹಬ್ಬಿದೆ. ಹೋಟೆಲ್, ಅಂಗಡಿಗಳ ಮೇಲೆ ದಾಳಿಯಾಗುತ್ತಿದೆ.
ನೃತ್ಯ ತರಗತಿ ವೇಳೆ ಮೂವರು ಬ್ರಿಟಿಷ್ ಬಾಲಕಿಯರನ್ನು ಇತ್ತೀಚೆಗೆ ಹತ್ಯೆ ಮಾಡಲಾಗಿತ್ತು. ನಂತರ ಕೃತ್ಯ ಎಸಗಿದ ಆಕ್ಸೆಲ್ ರುಡಕುಬಾನಾ 17 ವರ್ಷದ ಯುವಕನನ್ನು ಬಂಧಿಸಲಾಗಿತ್ತು. ಹಂತಕ ಮುಸ್ಲಿಂ ವಲಸಿಗ ಎಂಬ ವದಂತಿ ಹಬ್ಬಿದ್ದರಿಂದಾಗಿ ಈಗ ಸ್ಥಳೀಯರು ಮತ್ತು ಬಲಪಂಥೀಯ ಸಂಘಟನೆಗಳು ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಹಂತಕ ಕ್ರಿಶ್ಚಿಯನ್ ಎಂದು ವರದಿಯಾಗಿದೆ. ಘರ್ಷಣೆಗಳಲ್ಲಿ ಪ್ರತಿಭಟನಾಕಾರರು ಸರ್ಕಾರಿ ಕಚೇರಿಗೆ ನುಗ್ಗಿ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿವೆ.
ಲೀಡ್ಸ್‌ನಲ್ಲಿ ಸರಿಸುಮಾರು 150 ಜನರು ಇಂಗ್ಲಿಷ್ ಧ್ವಜಗಳನ್ನು ಹಿಡಿದುಕೊಂಡು, ನೀವು ಇನ್ನು ಮುಂದೆ ಇಂಗ್ಲಿಷ್ ಪ್ರಜೆಗಳಲ್ಲ ಎಂದು ವಲಸಿಗರ ವಿರುದ್ಧ ಘೋಷಣೆ ಕೂಗಿದ್ದಾರೆ. ಮುಸ್ಲಿಂರು ಅಲ್ಲಾ ಹು ಅಕ್ಬರ್ ಕೂಗುತ್ತಾ ಮಾರಕಾಸ್ತ್ರ ಹಿಡಿದು ಓಡಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗಾಗಿ ಅಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.