ಲಡ್ಡುಗಾಗಿ ರಣರಂಗವಾದ ಮದುವೆ ಮನೆ
ಛತ್ತೀಸ್‌ಗಢ: ಲಡ್ಡುಗಾಗಿ ಮದುವೆ ಮನೆಯಲ್ಲಿ ಎರಡು ಕುಟುಂಬದವರು ಹೊಡೆದಾಡಿಕೊಂಡ ಘಟನೆ ಮುಂಗೇಲಿ ಜಿಲ್ಲೆಯ ಚಾರ್ಭಾಟದಲ್ಲಿ ನಡೆದಿದೆ.
ನಡೆದಿದ್ದೇನು:? ಮುಂಗೇಲಿ ಜಿಲ್ಲೆಯ ಬೆಮೆತಾರಾ ಗ್ರಾಮಕ್ಕೆ ಸೇರಿದ ಗುಣರಾಮ್ ಸಾಹು ಅವರ ಪುತ್ರ ಸೂರಜ್ ಸಾಹು ಅವರು ರಂಭಾಜ್ ಸಾಹು ಅವರ ಮಗಳು ಕುಂತಿಯೊಂದಿಗೆ ವಿವಾಹವಾಗಲು ಚಾರ್ಭಾಟದಲ್ಲಿರುವ ವಧುವಿನ ಮನೆಗೆ ತೆರಳಿದ್ದರು.
ವಧುವಿನ ಮನೆಗೆ ತಲುಪಿದ ವರನ ಪಕ್ಷದವರು ಊಟಕ್ಕೆ ಕುಳತಿದ್ದಾರೆ. ಈ ಸಮಯದಲ್ಲಿ ವರನ ಪಕ್ಷದವರು ವಿಭಿನ್ನ ತಿನಿಸುಗಳನ್ನು ಸವಿಯುತ್ತಿರುವಾಗ ಕೆಲ ವರನ ಪಕ್ಷದವರು ಲಡ್ಡುಗಳನ್ನು ಕೇಳಿದ್ದಾರೆ. ಆದರೆ, ಮದುವೆ ಮನೆಯಲ್ಲಿ ವಧುವಿನ ಪಕ್ಷದವರು ಲಡ್ಡುಗಳ ವ್ಯವಸ್ಥೆ ಮಾಡಿರಲಿಲ್ಲ. ಲಡ್ಡೂ ವ್ಯವಸ್ಥೆ ಮಾಡದ ಕಾರಣ ವರನ ಪಕ್ಷದವರ ಬೇಡಿಕೆ ಈಡೇರಿಸಲು ವಧುವಿನ ಪಕ್ಷದವರಿಗೆ ಸಾಧ್ಯವಾಗಿಲ್ಲ.
ಈ ವೇಳೆ, ಎರಡೂ ಪಕ್ಷದ ಕಡೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿವೆ. ಗಲಾಟೆ ಮತ್ತು ಹೊಡೆದಾಟದ ಬಳಿಕ ಎರಡು ಕುಟುಂಬಗಳು ಮುಂಗೇಲಿ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಎರಡು ಕುಟುಂಬಗಳ ದೂರನ್ನು ಠಾಣೆಯ ಟೌನ್ ಇನ್ಸ್‌ಪೆಕ್ಟರ್ ತಾಳ್ಮೆಯಿಂದ ಆಲಿಸಿ ಪರಿಸ್ಥಿತಿಯ ಗಂಭೀರತೆ ಅರಿತುಕೊಂಡಿದ್ದಾರೆ.
ನಂತರ ಎರಡು ಕುಟುಂಬಸ್ಥರನ್ನು ಕರೆದು ಸಣ್ಣಪುಟ್ಟ ವಿಚಾರಕ್ಕೆ ಸಂಬಂಧ ಕಡಿದುಕೊಳ್ಳಬೇಡಿ. ಇದು ಎರಡೂ ಕುಟುಂಬಗಳಿಗೆ ದೊಡ್ಡ ನಷ್ಟವಾಗಲಿದೆ. ಜಗಳ ಬಿಟ್ಟು ಒಂದಾಗಿ ಎಂದು ಸಮಾಧಾನ ಪಡಿಸಿದರು. ಇನ್ಸ್‌ಪೆಕ್ಟರ್ ಮಾತಿಗೆ ಎರಡು ಕುಟುಂಬಗಳು ಗೌರವಿಸಿದವು. ತಮ್ಮ ಮಕ್ಕಳ ಜೀವನ ಮತ್ತು ಪೊಲೀಸರ ಮಾತಿಗೆ ಗೌರವಿಸಿದ ಎರಡೂ ಕುಟುಂಬಗಳು ವಿವಾಹವನ್ನು ಅದ್ಧೂರಿಯಾಗಿ ನಡೆಸಿದರು.