ಕರಾಚಿ, ಮೇ 23 : ಲಾಹೋರ್ ನಿಂದ ಹೊರಟಿದ್ದ ವಿಮಾನ ಕರಾಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಲು ಪ್ರಯತ್ನಿಸುವಾಗ ಪತನಗೊಂಡಿದೆ.
ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ ಲೈನ್ಸ್ ವಿಮಾನದ ಪೈಲಟ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲರ್ ನಡುವಿನ ಅಂತಿಮ ಕ್ಷಣದ ಸಂಭಾಷಣೆ ಬಹಿರಂಗವಾಗಿದೆ.
ಅಡಿಯೊ ಸಂಭಾಷಣೆಯ ಅಂತಿಮ ಕ್ಷಣದಲ್ಲಿ ಪಿಕೆ 8303 ವಿಮಾನದ ಪೈಲಟ್ ಅವರು ಎರಡೂ ಎಂಜಿನ್ಗಳು ವಿಫಲವಾಗಿದೆ ಎಂದೂ ಮತ್ತು ಮೇಡೇ, ಮೇಡೇ, ಮೇಡೇ ಎನ್ನುವ ಕೊನೆಯ ಸಂದೇಶ ದಾಖಲಾಗಿದೆ.
ಮೇಡೇ ಎನ್ನುವುದು ತುರ್ತು ಅಥವಾ ಅಪಾಯದ ಸಂದರ್ಭದಲ್ಲಿ ನೀಡುವ ಕರೆ ಸಂದೇಶ.
ಏರ್ ಟ್ರಾಫಿಕ್ ಕಂಟ್ರೋಲರ್, 99 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿಗಳನ್ನು ಹೊತ್ತು ಬರುತ್ತಿದ್ದ ವಿಮಾನದ ಪೈಲಟ್ ಗೆ ಸಲಹೆಗಳನ್ನು ನೀಡಲು ಯತ್ನಿಸುತ್ತಾರೆ. ಆದರೆ ವಿಮಾನ ಪತನಗೊಳ್ಳುತ್ತದೆ.
ಪೈಲಟ್: ಪಿಕೆ 8303 [ಗೆ] ಅಪ್ಡೇಟ್
ಎಟಿಸಿ: ಹೌದು ಸರ್
ಪೈಲಟ್: ನಾವು ಎಡಕ್ಕೆ ತಿರುಗಬೇಕೇ?
ಎಟಿಸಿ: ಖಂಡಿತವಾಗಿ
ಪೈಲಟ್: ನಾವು ನೇರವಾಗಿ ಮುಂದುವರಿಯುತ್ತಿದ್ದೇವೆ, ನಮ್ಮ ಎರಡೂ ಎಂಜಿನ್ಗಳು ವಿಫಲವಾಗಿದೆ.
ಎಟಿಸಿ: ನೀವು ಬೆಲ್ಲಿ ಲ್ಯಾಂಡಿಂಗ್ ಮಾಡುತ್ತಿದ್ದೀರಿ ಎಂದು ಖಚಿತಪಡಿಸಬಹುದೇ?
ಪೈಲಟ್ ಮಾತನಾಡುವುದು ಕೇಳಿಸುವುದಿಲ್ಲ
ಎಟಿಸಿ: ಲ್ಯಾಂಡಿಂಗ್ ಗೆ ರನ್ ವೇ ಲಭ್ಯವಿದೆ
ಪೈಲಟ್: ರೋಜರ್
ಪೈಲಟ್: ಸರ್, ಮೇಡೇ, ಮೇಡೇ, ಮೇಡೇ, ಪಾಕಿಸ್ತಾನ 8303
ಎಟಿಸಿ: ಪಾಕಿಸ್ತಾನ 8303, ರೋಜರ್ ಸರ್. ಎರಡೂ ಮಾರ್ಗಗಳು ಲ್ಯಾಂಡಿಂಗ್ ಮಾಡಲು ಲಭ್ಯವಿದೆ.
ಅಲ್ಲಿಗೆ ಆಡಿಯೋ ಸ್ಥಗಿತಗೊಳ್ಳುತ್ತದೆ
ಸ್ವಲ್ಪ ಸಮಯದ ನಂತರ, ವಿಮಾನವು ಕರಾಚಿಯ ವಸತಿ ಪ್ರದೇಶದಲ್ಲಿ ಪತನಗೊಂಡ ಸುದ್ದಿ ಬರುತ್ತದೆ.
ಲಾಹೋರ್ ನಿಂದ ಕರಾಚಿಗೆ ತೆರಳುತ್ತಿದ್ದ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ ಲೈನ್ಸ್ ಗೆ ಸೇರಿದ ವಿಮಾನ ಶುಕ್ರವಾರ ಮಧ್ಯಾಹ್ನ ಕರಾಚಿಯ ಜನದಟ್ಟಣೆಯಿಂದ ಕೂಡಿದ ವಸತಿ ಪ್ರದೇಶದಲ್ಲಿ ಪತನಗೊಂಡಿದೆ. ಪತನಗೊಳ್ಳುವ ಮೊದಲು ವಿಮಾನ ಇಳಿಸಲು ತಾಂತ್ರಿಕ ಸಮಸ್ಯೆಯಾಗುತ್ತಿದೆ ಎಂದು ಮಾಹಿತಿ ನೀಡಿ, ಕರಾಚಿ ವಿಮಾನ ನಿಲ್ದಾಣದ ಸಂಪರ್ಕ ಕಳೆದುಕೊಂಡಿತ್ತು.
ವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಇಡೀ ಪ್ರದೇಶದಲ್ಲಿ ಬೆಂಕಿ ಅವರಿಸಿಕೊಂಡಿತ್ತು. ವಿಮಾನದಲ್ಲಿ 99 ಪ್ರಯಾಣಿಕರು, 8 ಸಿಬ್ಬಂದಿಗಳು ಸೇರಿ 107 ಜನರಿದ್ದರು ಮತ್ತು ಅವರಲ್ಲಿ ಮೂವರು ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾರೆ.