ಶಿಥಿಲಗೊಂಡಿದ್ದ ದೇವಾಲಯವನ್ನು ಜೀರ್ಣೋದ್ಧಾರ ಮಾಡುವಾಗ ಚಿನ್ನದ ನಾಣ್ಯಗಳು ಪತ್ತೆಯಾದ ಘಟನೆ ತಮಿಳುನಾಡಿನ ತಿರುಚಿರಾಪಲ್ಲಿ ಜಿಲ್ಲೆಯ ತಿರುವಣ್ಣೈಕಾವಲ್ ತಾಲೂಕಿನ ಅಖಿಲಾಂಡೇಶ್ವರಿ ದೇವಾಲಯದಲ್ಲಿ ನಡೆದಿದೆ. ಅಖಿಲಾಂಡೇಶ್ವರಿ ದೇವಾಲಯದಲ್ಲಿ ಸದ್ಯ ನವೀಕರಣ ಕಾರ್ಯ ನಡೆಯುತ್ತಿದ್ದು, ಭೂಮಿ ಅಗೆಯುವ ವೇಳೆ ತಾಮ್ರದ ಪಾತ್ರೆಯೊಂದು ಪತ್ತೆಯಾಗಿದೆ. ಇದರಿಂದ ಅಚ್ಚರಿಗೊಂಡ ಸ್ಥಳೀಯರು ಪಾತ್ರೆಯನ್ನು ತೆಗೆದು ನೋಡಿದಾಗ ಅದರಲ್ಲಿ ಚಿನ್ನದ ನಾಣ್ಯಗಳಿರುವುದು ಕಂಡುಬಂದಿದೆ. ಕೂಡಲೇ ಸ್ಥಳೀಯ ಮುಖಂಡರು ಅಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದು, ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಸಿಕ್ಕಿರುವ ತಾಮ್ರದ ಪಾತ್ರೆಯಲ್ಲಿ ಒಟ್ಟು 505 ಚಿನ್ನದ ನಾಣ್ಯಗಳಿದ್ದು, ಇವು ಸುಮಾರು ಕ್ರಿ.ಶ.12 ನೇ ಶತಮಾನದ್ದಿರಬಹುದು ಎಂದು ಇತಿಹಾಸ ತಜ್ಞರು ಅಂದಾಜಿಸಿದ್ದಾರೆ.
fifaworldcup2026- ಯಮನಿಗೆ ಬೆನ್ನು ತೋರಿಸಿದ್ದ ಮೃತ್ಯುಂಜಯ.. ಫುಟ್‍ಬಾಲ್ ಜಗತ್ತಿನ ಸಾಂಬಾ ಡಾನ್ಸರ್ ನ ಬದುಕಿನ ಯಾನ..!
ಫುಟ್‍ಬಾಲ್ ಜಗತ್ತಿನಲ್ಲಿ ಇತಿಹಾಸವನ್ನ ಬರೆದವರಿದ್ದಾರೆ. ಸಾಮ್ರಾಜ್ಯವನ್ನು ಕಟ್ಟಿದವರಿದ್ದಾರೆ. ಆದ್ರೆ ಸಾವು ಬದುಕಿನ ಆಟದಲ್ಲಿ ಒಂದಲ್ಲ ಎರಡಲ್ಲ.. ನಾಲ್ಕು ಬಾರಿ ಯಮರಾಯನಿಗೆ ಬೆನ್ನು ತೋರಿಸಿ, ಫುಟ್‍ಬಾಲ್ ಮೈದಾನದಲ್ಲಿ ಚರಿತ್ರೆ...








