Fire Accident : ನಿಂತಿದ್ದ ಬಸ್ ನಲ್ಲಿ ಏಕಾಏಕಿ ಬೆಂಕಿ – ಮೂರು ಬಸ್ ಗಳು ಬೆಂಕಿಗಾಹುತಿ
ನಿಂತಿದ್ದ ಬಸ್ ಗೆ ಏಕಾಏಕಿ ಬೆಂಕಿ ತಗುಲಿದ್ದು , ನಂತರ ಪಕ್ಕದಲ್ಲೇ ಇದ್ದ ಿನ್ನೆರೆಡು ಬಸ್ ಗಳಿಗೂ ಬೆಂಕಿ ಹಬ್ಬಿದೆ.. ಘಟನೆಯಲ್ಲಿ ಮೂರು ಬಸ್ ಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ..
ಬೆಂಗಳೂರಿನ ಮೈಸೂರು ರಸ್ತೆಯ ಆರ್ ವಿ ಎಂಜಿನಿಯರಿಂಗ್ ಕಾಲೇಜ್ ಬಳಿ ಈ ಘಟನೆ ಸಂಭವಿಸಿದೆ.. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ..
ಬಸ್ ಗಳು SRS ಟ್ರಾವೆಲ್ಸ್ ಗೆ ಸೇರಿದ್ದಾಗಿವೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸಿದ್ದಾರೆ.