ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಗ್ನಿ ಅನಾಹುತ – ನಾಲ್ವರು ಸಜೀವ ದಹನ
ಮೂರು ಅಂತಸ್ತಿನ ಕಟ್ಟಡದ ಮೇಲೆಇನ ಮಹಡಿಯಲ್ಲಿ ಬೆಳ್ಳಂ ಬೆಳಿಗ್ಗೆ ಅಗ್ನಿ ಅನಾಹುತ ಸಂಭವಿಸಿದ್ದು, ನಾಲ್ವರು ಸಜೀವ ದಹಹನವಾಗಿರುವ ದುರ್ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಓಲ್ಡ್ ಸೀಮಾಪುರಿ ಪ್ರದೇಶದಲ್ಲಿನ ಕಟ್ಟಡದಲ್ಲಿ ಈ ಅನಾಹುತ ಸಂಭವಿಸಿದೆ. ಇಂದು ಮುಂಜಾನೆ 4 ಗಂಟೆಗೆ ಬೆಂಕಿ ತಗುಲಿದ್ದು, ನಾಲ್ವರ ಶವಗಳನ್ನ ಹೊರತೆಗೆಯಲಾಗಿದೆ. ನಾಲ್ವರೂ ಕೂಡ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿರೋದಾಗಿ ತಿಳಿದುಬಂದಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ಮೃತರನ್ನು 58 ವರ್ಷದ ಹರಿಲಾಲ್ , ಅವರ ಪತ್ನಿ 55 ವರ್ಷದ ರೀನಾ, ಅವರ ಮಗ 24 ವರ್ಷದ ಅಶು ಹಾಗೂ ಪುತ್ರಿ 18 ವರ್ಷದ ರೋಹಿಣಿ ಎಂದು ಗುರುತಿಸಲಾಗಿದೆ. ಹೊರಿಲಾಲ್ ದಂಪತಿಯ ಮತ್ತೊಬ್ಬ ಮಗ ಮಾತ್ರವೇ ಈ ಕುಟುಂಬದಲ್ಲಿ ಬದುಕುಳಿದಿದ್ದಾನೆ. ಆತ 2ನೇ ಅಂತಸ್ತಿನಲ್ಲಿ ನಿದ್ದೆ ಮಾಡ್ತಿದ್ದ ಪರಿಣಾಮ ಬಚಾವಾಗಿದ್ದಾರೆ ಎನ್ನಲಾಗಿದೆ. ಇನ್ನೂ ಸರಿಯಾಗಿ ನಿಖರ ಕಾರಣ ತಿಳಿದು ಬಂದಿಲ್ಲವಾದ್ರೂ ಪ್ರಾಥಮಿಕ ತನಿಖೆಯ ಪ್ರಕಾರ ಸೊಳ್ಳೆ ಕಾಯಿಲ್ ಗೆ ಬೆಂಕಿ ಹೊತ್ತಿದ ಪರಿಣಾಮ ಅಗ್ನಿ ಅನಾಹುತ ಸಂಭವಿಸಿದೆ ಎಂದು ತಿಳಿದುಬಂದಿದೆ.








