Fire Accident : ಇಂಡೋನೇಷ್ಯಾದ ತೈಲಸಂಗ್ರಹಗಾರದಲ್ಲಿ ಸ್ಪೋಟ – 17 ಮಂದಿ ಸಾವು…
ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ತೈಲ ಸಂಗ್ರಹಗಾರದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಜನರು ಗಾಯಗೊಂಡಿದ್ದಾರೆ. ಉತ್ತರ ಜಕಾರ್ತಾದ ತನಾಹ್ ಮೇರಾ ಪ್ರದೇಶದಲ್ಲಿ ಸರ್ಕಾರ ನಡೆಸುತ್ತಿರುವ ತೈಲ ಡಿಪೋದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಭಾರೀ ಮಳೆ ಮತ್ತು ಸಿಡಿಲಿನ ಕಾರಣ ಬೆಂಕಿ ವ್ಯಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ನಂತರ ಹಲವಾರು ಸ್ಫೋಟಗಳಿಗೆ ಕಾರಣವಾಯಿತು. ಸುತ್ತಮುತ್ತಲಿನ ಪ್ರದೇಶಗಳಿಗೆ ಬೆಂಕಿ ವ್ಯಾಪಿಸಿದ್ದರಿಂದ ಅಗ್ನಿಶಾಮಕ ಅಧಿಕಾರಿಗಳು ತಕ್ಷಣ ವಸತಿ ಪ್ರದೇಶಗಳಿಂದ ಸಾವಿರಾರು ಜನರನ್ನು ಸ್ಥಳಾಂತರಿಸಿದರು. ಭಾರೀ ಬೆಂಕಿಯಿಂದಾಗಿ ಜನರು ಭಯಭೀತರಾಗಿದ್ದರು.
ಮಾಹಿತಿ ತಿಳಿದ ತಕ್ಷಣ 180 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ 37 ಅಗ್ನಿಶಾಮಕ ಸಾಧನಗಳೊಂದಿಗೆ ಬೆಂಕಿಯನ್ನು ನಿಯಂತ್ರಿಸಲು ಮತ್ತು ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ರಕ್ಷಣಾ ಕಾರ್ಯಚರಣೆ ನಡೆಯಿತ್ತಿದೆ.
JUST IN – Massive fire at fuel storage station belonging to state-owned energy company Pertamina at North Jakarta, Indonesia – multiple people dead. pic.twitter.com/zSovcWb3AJ
— Insider Paper (@TheInsiderPaper) March 3, 2023
Fire Accident: Explosion in Indonesian oil refinery – 17 people died…