ಗುಜರಿ ಮಳಿಗೆಯಲ್ಲಿ ಬೆಂಕಿ ಅವಘಡ : ದಟ್ಟ ಹೊಗೆಯಿಂದ ಸಂಚಾರ ಅಸ್ತವ್ಯಸ್ತ
ಕಾರವಾರ : ಗುಜರಿ ಮಳಿಗೆಯಲ್ಲಿ ಬೆಂಕಿ ಅನಾಹುತ ಸಂಭವಿಸಿ, ಹೊತ್ತುರಿದ ಘಟನೆ ಕಾರವಾರದ ಭಟ್ಕಳ ಪುರವರ್ಗದ ಗಣೇಶನಗರದಲ್ಲಿ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣ ರಜಾಕ್ ಎಂಬುವವರಿಗೆ ಸೇರಿದ ಗುಜರಿ ಮಳಿಗೆಯಲ್ಲಿ ಈ ಅನಾಹುತ ಸಂಭವಿಸಿದೆ.
ಹೆದ್ದಾರಿ ಪಕ್ಕದಲ್ಲಿದ್ದ ಗುಜರಿ ಮಳಿಗೆಯಿದ್ದು, ಬೆಂಕಿ ಅವಘಡದಿಂದಾಗಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಹೆದ್ದಾರಿಯಲ್ಲಿ ಹೊಗೆ ಆವರಿಸಿ ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಭಟ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel