ದಕ್ಷಿಣ ಆಫ್ರಿಕಾದ ಪಾರ್ಲಿಮೆಂಟ್ ಕಟ್ಟಡದಲ್ಲಿ ಬೆಂಕಿ south-african
ಕೇಪ್ ಟೌನ್ : ದಕ್ಷಿಣ ಆಫ್ರಿಕಾದ ಪಾರ್ಲಿಮೆಂಟ್ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡು ಉರಿದಿದೆ. ಸ್ಥಳಕ್ಕೆ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.
ಆದರೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿಲ್ಲ ಎಂದು ನಗರ ತುರ್ತು ಸೇವೆಗಳ ವಕ್ತಾರ ತಿಳಿಸಿದ್ದಾರೆ.
ಮೊದಲು ಪಾರ್ಲಿಮೆಂಟ್ ನ ಮೇಲ್ಚಾವಣೆಯಲ್ಲಿ ಕಾಣಿಸಿಕೊಂಡ ಬೆಂಕಿ ತದನಂತರ ಅಸೆಂಬ್ಲಿ ಕಟ್ಟಡಕ್ಕೂ ವಿಸ್ತರಿಸಿದೆ.ಇದರಿಂದ ಕಟ್ಟಡದಲ್ಲಿ ಹೊಗೆ ಆವರಿಸಿಕೊಂಡಿದೆ.
In Cape Town South Africa Parliament Building on Fire. #sabcnews pic.twitter.com/5hB6Gbi8Z5
— Sophie Mokoena (@Sophie_Mokoena) January 2, 2022
ಇತ್ತ ಸಿಬ್ಬಂದಿ ಬೆಂಕಿಯನ್ನ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಅಂದಹಾಗೆ ಪಾರ್ಲಿಮೆಂಟ್ ನಲ್ಲಿ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಇಲ್ಲ.