ತುಮಕೂರು: ನಡೆದಾಡುವ ದೇವರು ಎಂದೇ ಮನೆಮಾತಾಗಿದ್ದ ಸಿದ್ದಗಂಗಾಮಠದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿ ಜೈವಿಕ ಉದ್ಯಾನವನಕ್ಕೆ ಕಳೆದ ರಾತ್ರಿ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ.
ತುಮಕೂರು ತಾಲೂಕಿನ ಪೆಮ್ಮನ್ನಹಳ್ಳಿಯಲ್ಲಿರುವ ಸಿದ್ದಗಂಗಾ ಜೈವಿಕ ಉದ್ಯಾನವನದಲ್ಲಿ ಇತ್ತಿಚೆಗಷ್ಟೇ ಪರಿಸರ ಪ್ರೇಮಿಗಳು ಮೂರು ಸಾವಿರ ಗಿಡಗಳನ್ನು ನೆಟ್ಟಿದ್ದರು.
ಬೆಂಕಿಯ ಕೆನ್ನಾಲಿಗೆಗೆ ಮೂರು ಸಾವಿರ ಗಿಡಗಳೂ ಸುಟ್ಟು ಭಸ್ಮವಾಗಿದ್ದು, ಮೊಲ, ನರಿ, ಕಾಡುಕೋಳಿ ಮುಂತಾದ ಪ್ರಾಣಿಗಳ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಜೈವಿಕ ಉದ್ಯಾನವನದಲ್ಲಿ ಅಪಾರ ಪ್ರಮಾಣದ ಗಿಡಮೂಲಿಕೆ, ಔಷಧೀಯ ಸಸ್ಯಗಳನ್ನು ಬೆಳೆಸಲಾಗುತ್ತಿತ್ತು. ಗಿಡಮೂಲಿಕೆ ಸಸ್ಯಗಳ ಜತೆಗೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಕೂಡ ನಾಶವಾಗಿದೆ. ಕಾಡ್ಚಿಚ್ಚಿನ ನಷ್ಟದ ಅಂದಾಜು ಇನ್ನಷ್ಟೇ ಬರಬೇಕಿದೆ. ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel