ಮೈಸೂರು ಧಾರವಾಡ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ – ತಪ್ಪಿದ ಅನಾಹುತ..
ಧಾರವಾಡ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಅಫಘಾತ ಸಂಭವಿಸಿದ್ದು ಕೂದಲೆಳೆ ಅಂತರದಲ್ಲಿ ಭಾರಿ ಅಫಘಾತ ಸಂಭವಿಸಿದೆ. ರೈಲು ಮೈಸೂರಿನಿಂದ ಧಾರವಾಡಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಮಂಡ್ಯ ಕೆ ಆರ್ ಪೇಟೆ ತಾಲೋಕಿನ ಮಂದಗೆರೆ ಬಳಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ರಾತ್ರಿ 10.30 ರಲ್ಲಿ ಮೈಸೂರಿನಿಂದ ಹೊರಟಿದ್ದ ಬಸ್ ಮಂದಗೆರೆ ಬಳಿ ಬರುತ್ತಿದ್ದಂತೆ ರಾತ್ರಿ 12 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ರೈಲು ಚಾಲಕ ರೈಲು ನಿಲ್ಲಿಸಿದ್ದರಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ತಕ್ಷಣವೆ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಬೆಂಕಿ ನಂದಿಸಿದ ಬಳಿಕ ರೈಲು ಸಂಚಾರ ಆರಂಭವಾಗಿದೆ. ಆದರೆ ರೈಲು ಇಳಿಯುವಾಗ ತಳ್ಳಾಟ ನೂಕಾಟ ನಡೆದಿದ್ದರಿಂದ ಕೆಲ ಪ್ರಮಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
Fire in mysore dharwad express train








