ಐದು ಎಕರೆ ಕಾಫಿ ತೋಟ ಬೆಂಕಿಗಾಹುತಿ
1 min read
ಐದು ಎಕರೆ ಕಾಫಿ ತೋಟ ಬೆಂಕಿಗಾಹುತಿ Saaksha Tv
ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ತಗುಲಿ ಸುಮಾರು ಐದು ಎಕರೆಯಷ್ಟು ಕಾಫಿ ತೋಟ ಬೆಂಕಿಗಾಹುತಿಯಾದ ಘಟನೆಯು ಜಿಲ್ಲೆಯ ಮೂಡಗೆರಿ ತಾಲೂಕಿನಲ್ಲಿ ನಡೆದಿದೆ.
ಘಟನೆಯು ಎರಡು ಕಡೆ ನಡೆದಿದೆ. ಬೆಟ್ಟಗೆರೆ ಗ್ರಾಮದ ರಿತೀಶ್ ಅವರಿಗೆ ಸೇರಿದ ಮೂರು ಎಕರೆ ಕಾಫಿ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ ಇದರರಿಂದ ಲಕ್ಷಾಂತರ ರೂಪಾಯಿ ಕಾಫಿ ಸುಟ್ಟು ಭಸ್ಮವಾಗಿದೆ. ಹಾಗೇ ತೋಟದಲ್ಲಿದ್ದ ಪೈಪುಗಳು ಸುಟ್ಟು ಬೂದಿಯಾಗಿದೆ, ದಶಕಗಳಿಂದ ಶ್ರಮ ಪಟ್ಪು ಬೆಳಸಿದ್ದ ತೋಟ ಬೆಂಕಿಗಾಹುತಿಯಾಗಿದ್ದನ್ನು ಕಂಡು ರೈತ ಕಣ್ಣೀರಿಟ್ಟಿದ್ದಾರೆ.
ಹಾಗೇ ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದಲ್ಲಿ ಕಾಫಿ ತೋಟಕ್ಕೆ ವಿದ್ಯುತ್ ತಂತಿ ತಗುಲಿ ಸುಮಾರು ಎರಡು ಎಕರೆ ತೋಟ ಸುಟ್ಟು ಕರಕಲಾಗಿದ್ದು, ತೋಟದಲ್ಲಿದ್ದ ಮೆಣಸಿನ ಬಳ್ಳಿಗಳು ಕೂಡ ಸಂಪೂರ್ಣ ನಾಶವಾಗಿದೆ. ಇದರಿಂದ ಲಕ್ಷಾಂತರ ರೂಪಾಯಿಯ ಕಾಫಿ ನಾಶವಾಗಿದ್ದು ಜೊತೆಗೆ ತೋಟದಲ್ಲಿ ಇಟ್ಟಿದ್ದ ಅನೇಕ ಸಾಮಗ್ರಿಗಳಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಈ ಸಣ್ಣ-ಸಣ್ಣ ಹಿಡುವಳಿದಾರರು ನಾಲ್ಕೈದು ಎಕರೆಯಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದರು, ಆದರೆ ಈಗ ಸಂಪೂರ್ಣ ನಾಶವಾಗಿರುವ ತೋಟವನ್ನು ಕಂಡು ಕಂಗೆಟ್ಟಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಅತಿವೃಷ್ಟಿಯಿಂದ ನಮ್ಮ ಬದುಕು ಬೀದಿಗೆ ಬಂದಿತ್ತು. ಆದರೀಗ ಇಡೀ ತೋಟವೇ ಸಂಪೂರ್ಣ ಸುಟ್ಟು ಕರಕಲಾಗಿರುವುದರಿಂದ ಭವಿಷ್ಯವೇ ಕತ್ತಲಾಗಿದೆ. ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ನೀಡದಿದ್ದರೆ ಮಳೆಯಿಂದ ಅಳಿದುಳಿದ ಬದುಕು ಸಂಪೂರ್ಣ ಬೀದಿಗೆ ಬಂದಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.