ಹಾವೇರಿ : ಪಟಾಕಿ ಗೋದಾಮಿಗೆ ಬೆಂಕಿ ತಗುಲಿದ ಪರಿಣಾಮ ಮೂವರು ಯುವಕರು ಸಜೀವ ದಹನವಾಗಿರುವ ಘಟನೆ ನಡೆದಿದೆ.
ಹಾವೇರಿ (Haveri)ಯ ಆಲದಕಟ್ಟಿ ಗ್ರಾಮದ ಹತ್ತಿರ ಇರುವ ಪಟಾಕಿ ಗೋದಾಮಿಗೆ (Firecracker Godown) ಬೆಂಕಿ ಹೊತ್ತಿದ ಪರಿಣಾಮ ಮೂವರು ಕಾರ್ಮಿಕರು ಸಜೀವವಾಗಿ ದಹನಗೊಂಡಿದ್ದಾರೆ.
ದ್ಯಾಮಪ್ಪ ಓಲೇಕಾರ, ರಮೇಶ್ ಬಾರ್ಕಿ ಹಾಗೂ ಶಿವಲಿಂಗ ಅಕ್ಕಿ ಎಂಬುವವರ ಮೃತದೇಹ ಪತ್ತೆಯಾಗಿದೆ. ತಾಲೂಕಿನ ಕಾಟೇನಹಳ್ಳಿ ಗ್ರಾಮದ ನಿವಾಸಿಗಳೇ ಸಾವನ್ನಪ್ಪಿದ್ದಾರೆ. ಪಟಾಕಿ ಅಂಗಡಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಾಮಾಗ್ರಿಗಳು ಹೆಚ್ಚಿನ ಸಂಖ್ಯೆಯಲ್ಲಿ ತರಲಾಗಿತ್ತು. ಹೀಗಾಗಿ ಮಾಲೀಕರು ಕೆಲಸಕ್ಕಾಗಿ ಹಲವರನ್ನು ನೇಮಿಸಿಕೊಂಡಿದ್ದರು. ಈಗಾಗಲೆ 3 ಮೃತದೇಹಗಳನ್ನು ಶವಗಾರಕ್ಕೆ ಸಾಗಿಸಲಾಗಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೋಟ್ಯಂತರ ರೂಪಾಯಿ ಮೌಲ್ಯದ ಪಟಾಕಿ ತರಲಾಗಿತ್ತು. ಒಂದೇ ಒಂದು ಸಣ್ಣ ಬೆಂಕಿಯ ಕಿಡಿಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಇಡೀ ಗೋದಾಮು ಬೆಂಕಿಗೆ ಆಹುತಿ ಆಗಿದೆ.