ಮೇ 26 ರಂದು ಈ ವರ್ಷದ ಮೊದಲ ಪೂರ್ಣ ಚಂದ್ರಗ್ರಹಣ – ಇಲ್ಲಿದೆ ಗ್ರಹಣ ಸಮಯದ ಮಾಹಿತಿ

1 min read
first lunar eclipse of this year is going to take place on 26 May

ಮೇ 26 ರಂದು ಈ ವರ್ಷದ ಮೊದಲ ಪೂರ್ಣ ಚಂದ್ರಗ್ರಹಣ – ಇಲ್ಲಿದೆ ಗ್ರಹಣ ಸಮಯದ ಮಾಹಿತಿ

ಈ ವರ್ಷದ ಮೊದಲ ಚಂದ್ರಗ್ರಹಣ ಮೇ 26 ರಂದು ಗೋಚರಿಸಲಿದೆ. ಪೂರ್ಣ ಚಂದ್ರಗ್ರಹಣ ದಿನದಂದು, ಚಂದ್ರನು ಭೂಮಿಗೆ ಹತ್ತಿರದಲ್ಲಿರುತ್ತಾನೆ ಮತ್ತು ಈ ಕಾರಣದಿಂದಾಗಿ ಗಾತ್ರದಲ್ಲಿ ದೊಡ್ಡದಾಗಿ ಕಾಣಿಸುತ್ತಾನೆ. ರಾತ್ರಿಯಲ್ಲಿ ಆಕಾಶವು ಸ್ಪಷ್ಟವಾದಾಗ ಗ್ರಹಣ ಕಾಣಿಸುತ್ತದೆ ಎಂದು ನಂಬಲಾಗಿದೆ. ಪೂರ್ಣ ಚಂದ್ರಗ್ರಹಣ ದಿನದಂದು,
ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬರುತ್ತದೆ. ಆಗ ಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತದೆ. ಭೂಮಿಯು ಚಂದ್ರನನ್ನು ಭಾಗಶಃ ಆವರಿಸಿದಾಗ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತದೆ.

ಹಿಂದೂ ಪಂಚಾಂಗದ ಗ್ರಹಣವು ಮೇ 26 ರಂದು ಮುಂಜಾನೆ 6.15ಕ್ಕೆ ಚಂದ್ರ ಗ್ರಹಣ ಸಂಭವಿಸುತ್ತದೆ. ಗ್ರಹಣವು ಮಧ್ಯಾಹ್ನ 3 ಗಂಟೆಗೆ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ ಮಯ ಸಂಜೆ 4 ಗಂಟೆಯಿಂದ 40 ನಿಮಿಷಗಳ ಕಾಲ ಖಗ್ರಾಸ ಚಂದ್ರ ಗ್ರಹಣವಾಗುವುದು. ಸಂಜೆ 6.23ರ ಹೊತ್ತಿಗೆ ಗ್ರಹಣದ ಅವಧಿ ಮುಕ್ತಾಯವಾಗುತ್ತದೆ.
ಮೇ 26 ರಂದು ನಡೆಯುವ ಚಂದ್ರ ಗ್ರಹಣವು ಪಶ್ಚಿಮ ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಆಗ್ನೇಯ ಏಷ್ಯಾದ ಕೆಲವು ಭಾಗಗಳಲ್ಲಿ ಕಾಣಿಸುತ್ತದೆ. ಈ ಚಂದ್ರ ಗ್ರಹಣ ಭಾರತದಲ್ಲಿ ಕಾಣಿಸುವುದಿಲ್ಲ.

first lunar eclipse of this year is going to take place on 26 May

ಈ ವರ್ಷ, ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ತಿಂಗಳುಗಳಲ್ಲಿ ನಾಲ್ಕು ಗ್ರಹಣಗಳು ನಡೆಯಲಿವೆ.

ಗಮನಾರ್ಹವಾಗಿ, ಸೂರ್ಯಗ್ರಹಣವು ಒಂದು ಪ್ರಮುಖ ಖಗೋಳ ಘಟನೆಯಾಗಿದೆ ಮತ್ತು ಜ್ಯೋತಿಷ್ಯದಲ್ಲಿ ಗ್ರಹಣ ಪ್ರಕ್ರಿಯೆಯನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ.

ಈ ವರ್ಷ, ಮೊದಲ ಸೂರ್ಯಗ್ರಹಣ 10 ಜೂನ್ 2021 ರಂದು ಸಂಭವಿಸಲಿದೆ. ಆದರೆ, ಇದು ಸಂಪೂರ್ಣ ಸೂರ್ಯಗ್ರಹಣವಾಗಿರುವುದಿಲ್ಲ. ಕೆನಡಾ, ಯುರೋಪ್, ರಷ್ಯಾ, ಗ್ರೀನ್‌ಲ್ಯಾಂಡ್, ಏಷ್ಯಾ ಮತ್ತು ಉತ್ತರ ಅಮೆರಿಕಾದಲ್ಲಿ ಭಾರತದ ಜೊತೆಗೆ ಸೂರ್ಯಗ್ರಹಣವನ್ನು ಕಾಣಬಹುದು. ಈ ವರ್ಷದ ಕೊನೆಯ ಸೂರ್ಯಗ್ರಹಣವು ಡಿಸೆಂಬರ್ 4, 2021 ರಂದು ನಡೆಯಲಿದೆ.

ಈ ವರ್ಷ ಒಟ್ಟು ನಾಲ್ಕು ಗ್ರಹಣಗಳು ಇರಲಿವೆ

ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ 2021 ರಲ್ಲಿ ಒಟ್ಟು 4 ಗ್ರಹಣಗಳು ನಡೆಯಲಿವೆ. ಇದರಲ್ಲಿ ಎರಡು ಚಂದ್ರಗ್ರಹಣಗಳು ಮತ್ತು ಎರಡು ಸೂರ್ಯಗ್ರಹಣಗಳು ಕಂಡುಬರುತ್ತವೆ.

– ಮೇ 26 ರಂದು ಮೊದಲ ಚಂದ್ರಗ್ರಹಣ

– ನವೆಂಬರ್ 19 ರಂದು ಎರಡನೇ ಚಂದ್ರಗ್ರಹಣ

– ಜೂನ್ 10 ರಂದು ಮೊದಲ ಸೂರ್ಯಗ್ರಹಣ

– ಡಿಸೆಂಬರ್ 4 ರಂದು ಎರಡನೇ ಸೂರ್ಯಗ್ರಹಣ

wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ.

#lunareclipse

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd