ವಾಷಿಂಗ್ಟನ್, ಮೇ 15 : ಕೊರೋನಾ ಸೋಂಕಿನ ಗಂಭೀರತೆಯನ್ನು ಜಗತ್ತಿನಿಂದ ಮುಚ್ಚಿಟ್ಟು, ಇಂದಿನ ಸಂದಿಗ್ಧ ಪರಿಸ್ಥಿತಿಗೆ ಕಾರಣವಾಗಿರುವ ಚೀನಾದ ಮೇಲೆ ಅಮೆರಿಕ ಕೆಂಡಾಮಂಡಲವಾಗಿರುವುದು ಎಲ್ಲರಿಗೂ ತಿಳಿದಿದೆ. ಈಗಾಗಲೇ ತನ್ನ ಸಂಸತ್ ನಲ್ಲಿ ಚೀನಾದ ಮೇಲೆ ದಿಗ್ಬಂಧನ ಹೇರಲು ಮಸೂದೆಯನ್ನು ಮಂಡಿಸಿರುವ ವಿಶ್ವದ ದೊಡ್ಡಣ್ಣ ಅಮೆರಿಕ ಇದೀಗ ಚೀನಾಕ್ಕೆ ಹೊಡೆತಗಳನ್ನು ನೀಡಲು ತೀರ್ಮಾನಿಸಿದಂತಿದೆ.
ಚೀನಾದ ಪೆನ್ಷನ್ ಫಂಡ್ ಗಳಲ್ಲಿ ತಾನು ಹೂಡಿಕೆ ಮಾಡಿದ್ದ ನೂರಾರು ಕೋಟಿ ಡಾಲರ್ ಗಳನ್ನು ಅಮೆರಿಕ ಹಿಂಪಡೆಯುವ ಮೂಲಕ ಚೀನಾಕ್ಕೆ ಮೊದಲ ಹೊಡೆತವನ್ನು ನೀಡಲು ಯೋಚಿಸಿದೆ. ಚೀನಾದ ಪಿಂಚಣಿ ನಿಧಿಗಳಲ್ಲಿ ತಾನು ಹೂಡಿದ್ದ ದೊಡ್ಡ ಮೊತ್ತದ ಹೂಡಿಕೆಯನ್ನು ಹಿಂಪಡೆವ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಸ್ಪಷ್ಟನೆಯನ್ನು ನೀಡಿದ್ದಾರೆ. ತಮ್ಮ ಆಡಳಿತ ಮಂಡಳಿ ಈ ವಿಷಯವಾಗಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಟ್ರಂಪ್ ಸ್ಥಳೀಯ ಸುದ್ದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅಮೆರಿಕದಲ್ಲಿರುವ ಚೀನಾ ಕಂಪೆನಿಗಳಿಗೆ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ನ ನಿಯಮಗಳು ಅನ್ವಯಿಸುವುದೇ ಎಂಬ ಸುದ್ದಿ ಮಾಧ್ಯಮದ ಪ್ರಶ್ನೆಗೆ ಅಲಿಬಾಬಾದಂತಹ ಕಂಪನಿಗಳಿಗೆ ಕೂಡ ಅದೇ ನಿಯಮಗಳು ಅನ್ವಯವಾಗುವುದು, ಅಲ್ಲದೇ ತಮ್ಮ ಆದಾಯದ ಬಗ್ಗೆ ಸರಿಯಾದ ಮಾಹಿತಿಗಳನ್ನು ನೀಡದಿರುವ ಕಂಪೆನಿಗಳ ಮೇಲೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ಸಹ ಟ್ರಂಪ್ ನೀಡಿದ್ದಾರೆ.
ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್
ಬೆಂಗಳೂರು: ನೈಸ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನದ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಮರ ಸಾರಿದ ಬೆನ್ನಲ್ಲೇ,ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಷ್ಟೇ...








