ಈ ವರ್ಷದ ಮೊದಲ ಸೂರ್ಯೋದಯ ಕಂಡು ಜನ ಸಂತಸ

1 min read
First sunrise Saaskha Tv

ಈ ವರ್ಷದ ಮೊದಲ ಸೂರ್ಯೋದಯ ಕಂಡು ಜನ ಸಂತಸ

ಹೊಸ ವರ್ಷದ 2022 ರ ಮೊದಲ ಸೂರ್ಯೋದಯ First sunrise Saaskha Tv

ಸೂರ್ಯೋದಯ ಕಂಡು ಸಂತಸಗೊಂಡ ಜನ

ದೆಹಲಿಯ ಇಂಡಿಯಾ ಗೇಟ್, ಗುವಾಹಟಿ, ಕೋಲ್ಕತ್ತಾದ ಹೌರಾ ಸೇತುವೆ ಬಳಿ ಸೇರಿದ ಜನ

ಈ ವರ್ಷದ ಮೊದಲ ಸೂರ್ಯೋದಯವನ್ನು ಕಂಡು ಭಾರತ ಸಂತಸಗೊಂಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಇಂಡಿಯಾ ಗೇಟ್, ಗುವಾಹಟಿ, ಕೋಲ್ಕತ್ತಾದ ಹೌರಾ ಸೇತುವೆ, ಮುಂಬೈನ ಗೇಟ್‌ವೇ ಆಫ್ ಇಂಡಿಯಾದ ಬಳಿ ಜನರು ಸೂರ್ಯೋದಯವನ್ನು ಕಣ್ತುಂಬಿಕೊಂಡಿದ್ದಾರೆ.

First sunrise Saaskha Tv

2021ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ದೇಶವು ಬಳಲಿತ್ತು.

ಲಾಕ್ ಡೌನ್ ಮತ್ತು ಇನ್ನೂ ಕಠಿಣ ನಿಯಮಗಳಿದ ಜನರು ರೋಸಿ ಹೋಗಿದ್ದರು, ಆದರೆ ಈ ವರ್ಷ ಈ ರೀತಿ ಆಗದಿರಲಿ ಎಂದು ಜನರು ಪ್ರಾರ್ಥಿಸಿದ್ದಾರೆ.

ಇತ್ತ ಕೋವಿಡ್-19 ಸೋಂಕು ಮತ್ತೆ ದೇಶದಲ್ಲಿ ಹೆಚ್ಚುತ್ತಿದ್ದು, ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.

ಈಗಾಗಲೆ ಕರ್ನಾಟಕದ ರಾಜ್ಯಾದ್ಯಂತ ಹೊಸ ವರ್ಷಾಚರಣೆಯ ಹಿನ್ನಲೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಇದಲ್ಲದೇ ರಾಜಸ್ಥಾನ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲೂ ಕೂಡಾ ಕರ್ಫ್ಯೂ ಜಾರಿಯಲ್ಲಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd