ಸ್ವತಂತ್ರ್ಯ ಬಂದ ಮೇಲೆ ಇದೇ ಮೊದಲ ಬಾರಿಗೆ ವಿದ್ಯುತ್ ಸೌಕರ್ಯ ಪಡೆದ ಗ್ರಾಮಗಳು ಇವು..!
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳೇ ಕಳೆಯಿತು. ಆದ್ರೂ ಈವರೆಗೂ ಕೆಲ ಗ್ರಾಮಾಂತರ ಭಾಗದಲ್ಲಿ ಸರಿಯಾದ ರಸ್ತೆ ಸೌಕರ್ಯಗಳಿಲ್ಲ. ವಿದ್ಯುತ್ ಸೌಲಭ್ಯಗಳಿಲ್ಲ. ಶಾಲಾ , ಕಾಲೇಜುಗಳು ಹೀಗೆ ಅನೇಕ ಸೌಕರ್ಯಗಳಿಂದ ಅನೇಕ ಗ್ರಾಮದ ಜನರು ಈಗಲೂ ವಂಚಿತರಾಗಿದ್ದಾರೆ.
ಅಂತಹದ್ದೇ ಗ್ರಾಮಗಳ ಸಾಲಿಗೆ ಸೇರಿದ್ದವು ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯ ಥಾಟ್ರಿಯಲ್ಲಿನ ಈ ಮೂರು ಗ್ರಾಮಗಳು.. ಈ ಮೂರು ಗ್ರಾಮಗಳಿಗೆ ಸ್ವಾತಂತ್ರ್ಯ ಬಳಿಕ ಇದೇ ಮೊದಲ ಬಾರಿಗೆ ವಿದ್ಯುತ್ ಸೌಕರ್ಯ ಸಿಗುತ್ತಿದೆ ಆ ಗ್ರಾಮಗಳ ಜನರು ಖುಷ್ ಆಗಿದ್ದಾರೆ.
2021ರಲ್ಲಿ ಪ್ರಪಂಚ ಅಲ್ಲೋಲ ಕಲ್ಲೋಲ.. ಪ್ರಕೃತಿ ವಿನಾಶ : ಕಾಲಜ್ಞಾನ
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜೊತೆ ಕೆಲ ದಿನಗಳ ಹಿಂದೆ ಸಭೆ ಸೇರಿದ್ದ ಗ್ರಾಮಸ್ಥರು ತಮ್ಮ ಗ್ರಾಮಗಳಲ್ಲಿ ಇನ್ನೂ ವಿದ್ಯುತ್ ಸೌಕರ್ಯ ಇಲ್ಲ ಎಂಬ ವಿಚಾರವನ್ನ ಬೆಳಕಿಗೆ ತಂದಿದ್ದರು. ಇದಾದ ಬಳಿಕ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಈ ಹಳ್ಳಿಗಳಿಗೆ ವಿದ್ಯುತ್ ಸೌಕರ್ಯ ನೀಡಲು ಎಲ್ಲಾ ವ್ಯವಸ್ಥೆಯನ್ನ ಮಾಡುತ್ತಿದ್ದಾರೆ.
ಅಲ್ಲದೇ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಥರ್ ಜಾರ್ಗರ್ ಅವರು ಈ ಗ್ರಾಮಗಳಿಗೆ 2021ರ ಜನವರಿ 15ರ ಒಳಗಾಗಿ ವಿದ್ಯುತ್ ಸೌಕರ್ಯ ವದಗಿಸುವ ಭರವಸೆ ನೀಡಿದ್ರು. ಇದೀಗ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ. ಈ ಗ್ರಮಾದ ಜನರನ್ನ ಕತ್ತಲಿನಿಂದ ಬೆಳಕಿಗೆ ಹೊಸ ವರ್ಷದಲ್ಲಿ ಹೆಜ್ಜೆ ಇಡುವ ಕೆಲಸ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








